ಬೆಂಗಳೂರು: ನಗರದ ಹಲವು ಏರಿಯಾಗಳಲ್ಲಿ ಇಂದಿನಿಂದ ಮೂರು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ನಗರದ ಜಲಶ್ರೀ ವಾಟರ್ ಸಪ್ಲೈ ಸರ್ವಿಸ್, ಟ್ರೀ ಪಂಪಿಂಗ್, ಆರ್ ಎಂ ಯು ಸರ್ವೀಸ್ ಸೇರಿ ಇನ್ನಿತರ ರಿಪೇರಿ ಕಾರ್ಯಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕೃತ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಅ.16ರಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್: ಜನರ ಅನುಕೂಲಕ್ಕಾಗಿ ಸಂಚಾರ ಮಾರ್ಗ ಬದಲಾವಣೆ
ಅದರಂತೆ ನಗರದ ಕುಣ್ಣೂರು, ಹೊಸಕೆರೆಹಳ್ಳಿ, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತ ನಗರ, ಗಿರಿನಗರ, ಸೀತಾಸರ್ಕಲ್, ವಿದ್ಯಾಪೀಠ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರೋಡ್, ಕತ್ರುಗುಪ್ಪೆ, ಅವಲಹಳ್ಳಿ, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇನ್ನೂ ದೇವನಹಳ್ಳಿ, ವಿಜಯಪುರ, ದೊಡ್ಡನಹಳ್ಳಿ, ಶಿವನಹಳ್ಳಿ, ಕಾವೇರಿನಗರ, ಹುಳಿಮಾವು, ಅಕ್ಷಯನಗರ, ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯ ಲೇಔಟ್, ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್ ಪಿಸಿ ಲೇಔಟ್, ವಿನಾಯಕ ಲೇಔಟ್, ನಾಗರಬಾವಿ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿನಾಯಕ ಲೇಔಟ್, ಫ್ರೆಂಡ್ಸ್ ಲೇಔಟ್, ಹನುಮಾರೆಡ್ಡಿ ಲೇಔಟ್, ದೊಡ್ಡನಕುಂಡಿ ಎಕ್ಸ್ ಟೆಕ್ಷನ್, ಚಿನ್ಬಪ್ಪನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.