ಟಿ20 ಕ್ರಿಕೆಟ್ ಸರಣಿಯು ಅಕ್ಟೋಬರ್ 16ರಂದು ಶುರುವಾಗಲಿದೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಂಡಿದೆ. ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮೆರೆದ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧವೂ ಗೆಲ್ಲುವ ಫೇವರಿಟ್ ಆಗಿದೆ. ಆದರೆ, ಹೊಸ ಕ್ಯಾಪ್ಟನ್ ಟಾಮ್ ಲೇಥಮ್ ಸಾರಥ್ಯದಲ್ಲಿ ಕಿವೀಸ್ ಬಳಿಗ ಆತಿಥೇಯರಿಗೆ ಶಾಕ್ ನೀಡುವುದಾಗಿದೆ.
ಬೆಂಗಳೂರಲ್ಲಿ ಅ.16ರಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್: ಜನರ ಅನುಕೂಲಕ್ಕಾಗಿ ಸಂಚಾರ ಮಾರ್ಗ ಬದಲಾವಣೆ
ಕೆಲ ದಿನಗಳ ಹಿಂದಷ್ಟೇ ಅಂತ್ಯಗೊಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಕ್ಲೀನ್ ಸ್ವೀಪ್ ಸೋಲಿಕ ಆಘಾತಕ್ಕೊಳಗಾಯಿತು. ಬಳಿಕ ತಂಡದ ಕ್ಯಾಪ್ಟನ್ ಮತ್ತು ಅನುಭವಿ ಫಾಸ್ಟ್ ಬೌಲರ್ ಟಿಮ್ ಸೌಥೀ ನೈತಿಕ ಹೊಣೆ ಹೊತ್ತು ಕ್ಯಾಪ್ಟನ್ಸಿ ಬಿಟ್ಟರು.
ನ್ಯೂಜಿಲೆಂಡ್ ತಂಡದ ಬೆಸ್ಟ್ ಪ್ಲೇಯಿಂಗ್ 11
01. ಡೆವೋನ್ ಕಾನ್ವೇ (ಓಪನರ್)
02. ವಿಲ್ ಯಂಗ್ (ಓಪನರ್)
03. ಟಾಮ್ ಲೇಥಮ್ (ವಿಕೆಟ್ಕೀಪರ್/ಬ್ಯಾಟ್ಸ್ಮನ್/ನಾಯಕ)
04. ಡ್ಯಾರಿಲ್ ಮಿಚೆಲ್ (ಆಲ್ರೌಂಡರ್)
05. ಗ್ಲೆನ್ ಫಿಲಿಪ್ಸ್ (ಬ್ಯಾಟರ್)
06. ರಚಿನ್ ರವೀಂದ್ರ (ಆಲ್ರೌಂಡರ್)
07. ಮಿಚೆಲ್ ಸ್ಯಾಂಟ್ನರ್ (ಆಲ್ರೌಂಡರ್)
08. ಮೈಕಲ್ ಬ್ರೇಸ್ವೆಲ್ (ಆಲ್ರೌಂಡರ್)
09. ಮ್ಯಾಟ್ ಹೆನ್ರಿ (ಫಾಸ್ಟ್ ಬೌಲರ್)
10. ಟಿಮ್ ಸೌಥೀ (ಫಾಸ್ಟ್ ಬೌಲರ್)
11. ವಿಲಿಯಮ್ ಒರೂಕಿ (ಫಾಸ್ಟ್ ಬೌಲರ್)
ಅಂದಹಾಗೆ ನ್ಯೂಜಿಲೆಂಡ್ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. ಭಾರತದ ಪಿಚ್ಗಳಿಗೆ ಅನುಕೂಲವಾಗಲಿ ಎಂಬಂತೆ ಸ್ಟಾರ್ ಸ್ಪಿನ್ನರ್ಗಳೊಂದಿಗೆ ಕಿವೀಸ್ ಪಡೆ ದಂಡೆತ್ತು ಬಂದಿದೆ. ಆದರೆ, ಸರಣಿ ಆರಂಭಕ್ಕೂ ಮೊದಲೇ ದೊಡ್ಡ ಹಿನ್ನಡೆ ಎಂಬಂತೆ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರ ಸೇವೆ ಕಳೆದುಕೊಂಡಿದೆ. ಗಾಯದ ಸಮಸ್ಯೆ ಕಾರಣ ಕೇನ್ ವಿಲಿಯಮ್ಸನ್ ಮೊದಲ ಟೆಸ್ಟ್ ಆಡುತ್ತಿಲ್ಲ. ಹೀಗಿರುವಾಗ ಆತಿಥೇಯ ಟೀಮ್ ಇಂಡಿಯಾಗೆ ಸವಾಲೊಡ್ಡಲು ನ್ಯೂಜಿಲೆಂಡ್ ಕಟ್ಟಿಕೊಳ್ಳಬಹುದಾದ ಬಲಿಷ್ಠ 11ರ ಬಳಗದ ವಿವರ ನೀಡಿದೆ.