ಬೆಂಗಳೂರು:- ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮೆ ಆದ್ರೂ ಮಹಿಳೆಯರ ಆಕ್ರೋಶ ಮಾತ್ರ ಕಮ್ಮಿ ಆಗಿಲ್ಲ. ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ: ಕೆಲವು ಜಿಲ್ಲೆಗಳಿಗೆ ಜಿಲ್ಲೆಗಳಿಗೆ ಆರೆಂಜ್, ಯೆಲ್ಲೊ ಅಲರ್ಟ್!
ನಮಗೆ ಹಣವೂ ಬೇಡ ನಾವು ಬ್ಯಾಂಕುಗಳಿಗೆ ಅಲೆಯುವುದೂ ಬೇಡ ಎಂದು ಗೃಹಿಣಿಯರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಾಕಿ ಇದ್ದು, ಈ ತಿಂಗಳಲ್ಲಿ ಬಾಕಿ ಇರುವ ಎರಡು ತಿಂಗಳ ಹಣವನ್ನೂ ವರ್ಗಾವಣೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಹೇಳಿದ್ದರು. ಆದರೆ ಸದ್ಯ ಗೃಹಲಕ್ಷ್ಮಿಯರ ಖಾತೆಗೆ ಕೇವಲ ಜೂನ್ ತಿಂಗಳ ಹಣ ಮಾತ್ರ ಜಮೆಯಾಗಿದ್ದು, ಜುಲೈ ತಿಂಗಳ ಹಣ ಬರಲಿದೆ ಎಂದುಕೊಂಡಿದ್ದ ಮಹಿಳೆಯರಿಗೆ ನಿರಾಸೆಯಾಗಿದೆ.
ಕಳೆದ 7 ನೇ ತಾರೀಖು ಜೂನ್ ತಿಂಗಳ ಹಣ ಹಾಗೂ 9 ನೇ ತಾರೀಖು ಜುಲೈ ತಿಂಗಳ ಹಣ ಜಮೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕಾರ್ ಹೇಳಿದ್ದರು. ಆದರೆ ಈಗ ಕೇವಲ ಒಂದು ತಿಂಗಳ ಹಣ ಬಂದಿದೆ.
ಸದ್ಯ ಗೃಹಲಕ್ಷ್ಮಿ ಯೋಜನೆಯಲ್ಲಿ 1.23 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಇವರಲ್ಲಿ ಸದ್ಯ ಶೇ 55 ರಷ್ಟು ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಿದೆ. ಇನ್ನು ಶೇ 45 ರಷ್ಟು ಮಹಿಳೆಯರಿಗೆ ತಲುಪಬೇಕಾದ ಹಣ ಇನ್ನಷ್ಟೇ ಜಮೆಯಾಗಬೇಕಿದೆ. ಆದರೆ, ಜುಲೈ ತಿಂಗಳ ಹಣವನ್ನು ಈ ತಿಂಗಳೇ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿ ಒಂದೇ ತಿಂಗಳ ಹಣ ಹಾಕಿ ಸುಮ್ಮನಾಗಿದೆ ಸರ್ಕಾರ. ಈ ವಾರವಾದರೂ ಎರಡು ತಿಂಗಳ ಹಣ ಒಟ್ಟಿಗೆ ಜಮಾವಣೆಯಾಗುತ್ತದೆಯಾ ಎನ್ನುವ ನಿರೀಕ್ಷೆಯಲ್ಲಿ ಗೃಹಲಕ್ಷ್ಮಿಯರು ಇದ್ದಾರೆ ಎನ್ನಲಾಗಿದೆ.