ಹುಬ್ಬಳ್ಳಿ:- ಲೈಂಗಿಕ ದೌರ್ಜನ್ಯ ಕೇಸ್ ಗೆ ಸಂಬಧಪಟ್ಟಂತೆ ವಿನಯ್ ಕುಲಕರ್ಣಿ ಆಪ್ತನಿಂದ ಸಂತ್ರಸ್ತೆ ಹಾಗೂ ರೈತ ಹೋರಾಟಗಾರ್ತಿ ವಿರುದ್ದ ದೂರು ದಾಖಲಾಗಿದೆ.
ರೈತ ಹೋರಾಟಗಾರ್ತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಇತ್ತೀಚೆಗೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ಗುಡ್ಡದ ವಿರುದ್ಧವೂ ದೂರು ದಾಖಲಾಗಿತ್ತು.
ಇದೀಗ ರೈತ ಹೋರಾಟಗಾರ್ತಿ ಸೇರಿ ನಾಲ್ವರ ವಿರುದ್ಧ ಅರ್ಜುನ್ ಗುಡ್ಡದ ಪ್ರತಿದೂರು ದಾಖಲಿಸಿದ್ದಾರೆ. ಇದೀಗ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ಗುಡ್ಡದ ಮಂಜುಳಾ ಪೂಜಾರ್, ಜಗದೀಶ್, ಹನುಮಂತಪ್ಪ ಹಾಗೂ ಸಿದ್ದಪ್ಪ ಎಂಬುವರ ವಿರುದ್ದ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ IPC 1860,U/S 384,506 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ರೈತ ಹೋರಾಟಗಾರ್ತಿ ವಿರುದ್ಧ ದೂರು ದಾಖಲಾಗಿದೆ. ನಾನು ಹತ್ತಿ ಬೀಜದ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎಂದು ಅರ್ಜುನ್ಗೆ ಮಹಿಳೆ ಪರಿಚಯವಾಗಿದ್ದಾರೆ. ಬಳಿಕ ನಕಲಿ ಫೋಟೋ ತೋರಿಸಿ ಹಣಕ್ಕೆ ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ.