ಕಲಘಟಗಿ ( ಧಾರವಾಡ) : ಪಟ್ಟಣದ 14 ಬೂತ್ ಮಟ್ಟದ ಕಾರ್ಯಕ್ರಮ ನಡೆಯಿತು. ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಪ್ರಮುಖರನ್ನು ಸೇರಿಸಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಕುರಿತು ಹೆಚ್ಚು ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ತಿಳಿಸಿದರು.
ಸದಸ್ಯತ್ವ ಅಭಿಯಾನದ ಬಗ್ಗೆ ಶಶಿಧರ ನಿಂಬಣ್ಣವರ್ ಮಾತನಾಡಿದರು. ದೇಶದ ಬಲಿಷ್ಠ ನಾಯಕತ್ವ ಹೊಂದಿರುವ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕೈ ಬಲಪಡಿಸಲು ಯುವಕರು ಹೆಚ್ಚು ಸಂಖ್ಯೆಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳಿ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ಯುವಕರ ಕರ್ತವ್ಯ ಬಹಳ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಎಲ್ಲಾರಿ ಸಿಂಧೆ, ಯುವ ಮುಖಂಡ ಶಶಿಧರ್ ನಿಂಬಣ್ಣವರ್, ಪರಶುರಾಮ್ ರಜಪೂತ್, ಬಸವರಾಜ ಹೆಬ್ಬಳ್ಳಿಮಠ, ಕಲ್ಮೇಶ್ ಬೆಣ್ಣಿ, ಸುನಿಲ ಗಬ್ಬೂರ್, ಬಾನಪ್ಪ ಲಮಾಣಿ, ಶಿವಾಜಿ ಡಿಂಬಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.