ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಟಾಟಾ ದಾಖಲಿಸಿದ ಎಫ್ಐಆರ್ ಪ್ರಶ್ನಿಸಿ ಕುಮಾರಸ್ವಾಮಿ ಮತ್ತು ಎಂಎಲ್ಸಿ ರಮೇಶ್ ಗೌಡ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.21ಕ್ಕೆ ಮುಂದೂಡಿದೆ.
Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆಯಿಂದ 3 ದಿನ ಕರೆಂಟ್ ಕಟ್; ನಿಮ್ಮ ಏರಿಯಾ ಇದೇನಾ!?
ಉದ್ಯಮಿ ವಿಜಯ್ ಟಾಟಾಗೆ ಬೆದರಿಕೆ ಕೇಸ್ನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಎಂಎಲ್ಸಿ ರಮೇಶ್ ಗೌಡ ವಿರುದ್ಧವೂ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಿಖಿಲ್ ಕುಮಾರಸ್ವಾಮಿಯನ್ನ ಚನ್ನಪಟ್ಟಣ ಬೈ ಎಲೆಕ್ಷನ್ಗೆ ನಿಲ್ಲಿಸ್ತಾ ಇದ್ದೀನಿ, 50 ಕೋಟಿ ರೂ. ಕೊಡದೇ ಇದ್ರೆ ನಿಮ್ಮ ಪ್ರಾಜೆಕ್ಟ್ಗಳನ್ನ ಕಂಪ್ಲೀಟ್ ಮಾಡೋಕೆ ಬಿಡಲ್ಲ ಅಂತಾ ಹೆಚ್ಡಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ರು ಎಂದು ವಿಜಯ್ ತಾತಾ ದೂರು ನೀಡಿದ್ದರು. ಅಲ್ಲದೆ ರಮೇಶ್ ಗೌಡ ವಿರುದ್ಧ 5 ಕೋಟಿ ರೂ. ಬೇಡಿಕೆಯ ಬಾಂಬ್ ಸಿಡಿಸಿದ್ದರು. ಇದಾದ ಬೆನ್ನಲ್ಲೇ ರಮೇಶ್ ಗೌಡ ವಿಜಯ್ ಟಾಟಾ ವಿರುದ್ಧವೇ ಪ್ರತಿದೂರು ನೀಡಿ, ಅವರೇ 100 ಕೋಟಿ ರೂ. ನೀಡುವಂತೆ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.