ವಿಜಯಪುರ:- ಸಚಿವರಾಡುವ ಮಾತಿಗೆ ತಲೆಬುಡವಿಲ್ಲ ಎಂದು ಜಮೀರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಜಯಪುರ ಜಿಲ್ಲೆಯಲ್ಲಿ ಹನ್ನೊಂದು ಸಾವಿರ ಎಕರೆ ಜಮೀನು ವಕ್ಫ್ ಬೋರ್ಡ್ಗೆ ಸೇರಿದ್ದು ಎಂದು ಸಚಿವ ಜಮೀರ್ ಅಕ್ಮದ್ ಹೇಳಿದರೆ, ಸಚಿವರಾಡುವ ಮಾತಿಗೆ ತಲೆಬುಡವಿಲ್ಲ, ಅವರು ಹೇಳಿರುವ ಜಮೀನು ಸಂಘಸಂಸ್ಥೆಗಳು ದಾನದ ರೂಪದಲ್ಲಿ ಕೊಟ್ಟಿದ್ದು ಮತ್ತು ಆ ಜಮೀನುಗಳಲ್ಲಿ ರೈತರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ ಎಂದರು.
ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯರವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಿದ್ದಾರೆ, ಮಸೂದೆ ಪಾಸ್ ಆಗುವವರೆಗೆ ಜಮೀರ್ ಅಹ್ಮದ್ ಅವರ ಮೌಖಿಕ ಆದೇಶಗಳನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.