ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿ ಸಮಯ ದೂಡುತ್ತಿದ್ದಾರೆ. ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಜಾಮೀನಿಗೆ ಅರ್ಜಿ ಹಾಕಿದ್ದು, ಅರ್ಜಿಯ ವಿಚಾರಣೆ ಗುರುವಾರವಷ್ಟೆ ಅಂತ್ಯಗೊಂಡಿದೆ. ದರ್ಶನ್ ಪರವಾಗಿ ರಾಜ್ಯದ ಜನಪ್ರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ವಾದ, ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಅರ್ಜಿಯ ತೀರ್ಪನ್ನು ಇಂದು ಪ್ರಕಟಿಸಲಿದ್ದಾರೆ.
ಕೊತ್ತಂಬರಿ ಸೊಪ್ಪು ಬೇಗ ಕೊಳೆತು ಹೋಗುತ್ತಾ..? ಹೀಗಿಡಿ ಯಾವಾಗ್ಲೂ ಫ್ರೆಶ್ ಆಗಿರುತ್ತೆ!
ಇನ್ನೂ ನಟ ದರ್ಶನ್ ಭೇಟಿ ಮಾಡಲು ದರ್ಶನ್ ಆಪ್ತ ಧನ್ವೀರ್ ಹಾಗೂ ಆಪ್ತರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ಜೈಲಿಗೆ ಆಗಮಿಸಿದ ಧನ್ವೀರ್, ಹೇಮಂತ್, ನಟ ದರ್ಶನ್ ಅವರಿಗಾಗಿ ಮೂರು ಬ್ಯಾಗ್ ಗಳಲ್ಲಿ ಬಟ್ಟೆಗಳು, ಬೇಕರಿ ತಿನಿಸು, ಡ್ರೈ ಫ್ರೂಟ್ಸ್ ತಂದಿದ್ರು. ಧನ್ವೀರ್, ಹಾಗೂ ಹೇಮಂತ್ ಸಂದರ್ಶಕರ ಕೊಠಡಿಗೆ ತೆರಳಿದ್ರು. ಪತಿ ದರ್ಶನ್ ನೋಡಲು ವಿಜಯಲಕ್ಷ್ಮಿ ಪ್ರತಿ ವಾರ ಬಳ್ಳಾರಿ ಜೈಲಿಗೆ ಭೇಟಿ ನೀಡ್ತಿದ್ರು. ಇಂದುಕೂಡ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಬೇಕಿತ್ತು. ಆದ್ರೆ ಕೊನೆ ಕ್ಷಣದಲ್ಲಿ ವಿಜಯಲಕ್ಷ್ಮಿ ಜೈಲು ಭೇಟಿಯನ್ನು ರದ್ದುಗೊಳಿಸಿದ್ದಾರೆ.