ವಿಶ್ವದೆಲ್ಲೆಡೆ ಮದ್ಯ ಸೇವನೆ ನಡೆಯುತ್ತದೆ. ಸಾಮಾನ್ಯವಾಗಿ ಉಷ್ಣ ಹೆಚ್ಚಿರುವ ಪ್ರದೇಶಗಳಲ್ಲಿ ಬಿಯರ್ ಕುಡಿಯುತ್ತಾರೆ. ಶೀತ ಹೆಚ್ಚಿರುವ ಪ್ರದೇಶಗಳಲ್ಲಿ ವಿಸ್ಕಿ, ಬ್ರಾಂಡಿ ಇತ್ಯಾದಿ ಹಾಟ್ ಡ್ರಿಂಕ್ಸ್ ಕುಡಿಯುತ್ತಾರೆ. ಈ ಹಾಟ್ ಡ್ರಿಂಕ್ಸ್ನಲ್ಲಿ ಆಲ್ಕೋಹಾಲ್ ಅಂಶ ಅಧಿಕ ಇರುವುದರಿಂದ ದೇಹ ಬೆಚ್ಚಗಾಗುತ್ತದೆ ಎನ್ನುವುದು ಅದಕ್ಕೆ ಕಾರಣ.
ವಿಶ್ವದ ಅತ್ಯುತ್ತಮ ವಿಸ್ಕಿ, ಬ್ರಾಂಡಿಗಳು ಐರೋಪ್ಯ ದೇಶಗಳಲ್ಲಿ ಸಿಗುತ್ತದೆ. ಅದೇ ಅಮೆರಿಕದಲ್ಲಿ ಜನರು ಬಿಯರ್ ಹೆಚ್ಚು ಕುಡಿಯುತ್ತಾರೆ. ಆದರೆ, ಭಾರತದ ಹೆಚ್ಚಿನ ಪ್ರದೇಶಗಳು ಉಷ್ಣವಲಯದ್ದಾಗಿದ್ದರೂ ಇಲ್ಲಿನ ಜನರು ಹಾಟ್ ಡ್ರಿಂಕ್ಸ್ ಹೆಚ್ಚು ಕುಡಿಯುತ್ತಾರೆ.
ಕೆಲವೊಮ್ಮೆ ಆಲ್ಕೋಹಾಲ್ ಸೇವಿಸಿದರೆ, ಅದು ಆರೋಗ್ಯದ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ. ಆದರೆ ಹೆಚ್ಚಾಗಿ ಸೇವನೆ ಮಾಡಿದರೆ ಇದರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಕೆಲವೊಂದು ಸೇವಿಸಿದರೆ ಪರಿಣಾಮ ತುಂಬಾನೆ ಕೆಟ್ಟದಾಗಿರುತ್ತದೆ.
ಕೊತ್ತಂಬರಿ ಸೊಪ್ಪು ಬೇಗ ಕೊಳೆತು ಹೋಗುತ್ತಾ..? ಹೀಗಿಡಿ ಯಾವಾಗ್ಲೂ ಫ್ರೆಶ್ ಆಗಿರುತ್ತೆ!
ವಿಸ್ಕಿ ಮತ್ತು ಬಿಯರ್ ಎರಡನ್ನೂ ಒಟ್ಟಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗಿದೆ. ಈ ರೀತಿಯಾಗಿ ಬೇರೆ ಬೇರೆ ಮದ್ಯವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಮಾನವನ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಈ ರೀತಿಯಾಗಿ ಮದ್ಯ ಸೇವನೆ ಮಾಡುವುದರಿಂದ ಮದ್ಯ ವ್ಯಸನಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ವಿಸ್ಕಿ ಮತ್ತು ಬಿಯರ್ ಈ ಎರಡನ್ನೂ ಒಟ್ಟಿಗೆ ಸೇವಿಸಿದರೆ ವಾಂತಿ, ಭೇದಿಯಾಗುವ ಸಂಭವ ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಮತ್ತು ಎದೆಯುರಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಬಿಯರ್ ಮತ್ತು ವಿಸ್ಕಿಯನ್ನು ಒಟ್ಟಿಗೆ ಕುಡಿಯುವುದರಿಂದ ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.