ಮುಂಬೈ: 2025ರಿಂದ 2027 ಆವೃತ್ತಿಗಳಿಗೆ ಬಿಸಿಸಿಐ ವಿಧಿಸಿರುವ ಹೊಸ ನಿಯಮಗಳ (BCCI IPL Rules) ಕುರಿತು ಆಸೀಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಪ್ರತಿಕ್ರಿಯೆ ನೀಡಿದ್ದು, ನನಗೆ ಐಪಿಎಲ್ಗಿಂತಲೂ ಟೆಸ್ಟ್ ಕ್ರಿಕೆಟ್ ಮುಖ್ಯ ಎಂದು ಹೇಳಿದ್ದಾರೆ.
ಹೌದು. ಬಿಸಿಸಿಐ ಹೊಸ ನಿಯಮದ ಫ್ರಾಂಚೈಸಿಗಳು ಖರೀದಿ ಮಾಡಿದ ನಂತರ ವಿದೇಶಿ ಆಟಗಾರರು ಲೀಗ್ನಿಂದ ಹಿಂದೆ ಸರಿದರೆ 2 ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. ವೈದ್ಯಕೀಯ ಮತ್ತು ಫಿಟ್ನೆಸ್ ಸಮಸ್ಯೆ ಇರುವ ಆಟಗಾರರಿಗೆ ಮಾತ್ರ ಟೂರ್ನಿಯಿಂದ ಹೊರಗುಳಿಯಲು ಅವಕಾಶವಿರುತ್ತದೆ ಎಂದು ಹೇಳಿದೆ. ಈ ನಿಮಯದ ಬಗ್ಗೆ ಕಮ್ಮಿನ್ಸ್ ಪ್ರತಿಕ್ರಿಯೆ ನೀಡಿದ್ದು, ಇದು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಮ್ಮಿನ್ಸ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಿನ ಐಪಿಎಲ್ ನಿಯಮಗಳು ಬದಲಾಗಿವೆ. ಈ ಹಿಂದೆಯೂ ನಾನು ಹರಾಜಿನ ನಂತರ ಐಪಿಎಲ್ನಿಂದ (IPL 2025) ಹಿಂದೆ ಸರಿದಿಲ್ಲ. ಹಾಗಾಗಿ ಈ ನಿಯಮ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಐಪಿಎಲ್ಗೆ ಸಂಬಂಧಿಸಿದ ಒಂದು ಅಂಶವನ್ನು ಪರಿಗಣಿಸುವುದಾದ್ರೆ, ನನಗೆ ಐಪಿಎಲ್ಗಿಂತ ಟೆಸ್ಟ್ ಕ್ರಿಕೆಟ್ ತುಂಬಾ ಮುಖ್ಯ ಎಂದು ಹೇಳಿಕೊಂಡಿದ್ದಾರೆ.
2024ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿ ಮಾಡಿತು. ಬಳಿಕ ಹೈದರಾಬಾದ್ ತಂಡದ ನಾಯಕನಾಗಿ ಮುನ್ನಡೆಸಿದ ಪ್ಯಾಟ್ ಕಮ್ಮಿನ್ಸ್ ತಂಡವನ್ನು ಫೈನಲ್ವರೆಗೆ ಕೊಂಡೊಯ್ದಿದ್ದರು. 31 ವರ್ಷ ವಯಸ್ಸಿನ ಕಮ್ಮಿನ್ಸ್ 2027ರ ವರೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.