ಭಾರತೀಯ ಕ್ರಿಕೆಟ್ ನ ದಂತಕತೆ ಮಹೇಂದ್ರ ಸಿಂಗ್ ಧೋನಿ ಅವರಿಂದಲೂ ಮಾಡಲು ಅಸಾಧ್ಯವಾದ ಒಂದು ದಾಖಲೆಯನ್ನು ಇದೀಗ ಸಂಜು ಸ್ಯಾಮ್ಸನ್ ಅವರು ಮಾಡಿದ್ದಾರೆ.
3ನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಅವರು ಶತಕದೊಂದಿಗೆ ತಂಡದ ಗೆಲುವಿಗೂ ಕಾರಣರಾದರು ಎಂಬುದು ತಿಳಿದೇ ಇದೆ. ಅವರು 111 ರನ್ ಬಾರಿಸಿ ಔಟಾಗುವಷ್ಟರಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾದವು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ವಿಕೆಟ್ ಕೀಪರ್ ಒಬ್ಬ ಬಾರಿಸಿದ ಮೊದಲ ಶತಕ ಮತ್ತು ಅತಿ ಹೆಚ್ಚು ರನ್ ಎಂದು ಪರಿಗಣಿತವಾಗಿದೆ.
ನಂಬಿದರೆ ನಂಬಿ ಬಿಟ್ಟರೆ ಬಿಡಿ ಮಹೇಂದ್ರ ಸಿಂಗ್ ಧೋನಿ ಸಹ ಟಿ20 ಕ್ರಿಕೆಟ್ ನಲ್ಲಿ ಒಂದೂ ಶತಕ ಗಳಿಸಿಲ್ಲ. ತಮ್ಮ ಒಟ್ಟೂ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದಲ್ಲಿ ಅವರು 2 ಅರ್ಧಶತಕ ಗಳಿಸಿದ್ದಾರೆ. ಧೋನಿಯೊಂದಿಗೆ ಯಾವ ಆಟಗಾರನನ್ನೂ ಹೋಲಿಸಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ ಈ ಒಂದು ವಿಚಾರದಲ್ಲಿ ಸಂದು ಸ್ಯಾಮ್ಸನ್ ಅವರೇ ಮೊದಲಿಗರಾಗಿದ್ದಾರೆ.
2022ರಲ್ಲಿ ಇಶಾನ್ ಕಿಶನ್ ಅವರು ಶ್ರೀಲಂಕಾ ವಿರುದ್ಧ ಬಾರಿಸಿದ್ದ 89 ರನ್ ಈವರೆಗೆ ಭಾರತೀಯ ವಿಕೆಟ್ ಕೀಪರ್ ಒಬ್ಬ ಟಿ20 ಪಂದ್ಯದಲ್ಲಿ ಗಳಿಸಿದ ಅತಿ ಹೆಚ್ಚು ರನ್ ಆಗಿತ್ತು. ಬಾಂಗ್ಲಾ ವಿರುದ್ದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ರಿಶಾದ್ ಹುಸೈನ್ ಗೆ 5 ಸಿಕ್ಸರ್ ಹೊಡೆದ ಸಂಜು ಸ್ಯಾಮ್ಸನ್ ಈ ದಾಖಲೆಯನ್ನು ಮೀರಿ ನಿಂತರು.