ಬೆಂಗಳೂರು: ಹಳೆಯ ದ್ವೇಷಕ್ಕೆ ಮತ್ತೆ ನೆತ್ತರು ಹರಿದಿದೆ. ಜೊತೆಯಲ್ಲೇ ಕುಡಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ಬಾರ್ ಒಳಗೆ ನಡೆದಿದೆ.
25 ವರ್ಷದ ಯೋಗೆಂದ್ರ ಸಿಂಗ್ ಕೊಲೆಯಾದ ವ್ಯಕ್ತಿ. ಈತ ಕಸ್ತೂರಿ ನಗರದ ನಿವಾಸಿ. 28 ವರ್ಷದ ಉಮೇಶ್ ಕೊಲೆ ಆರೋಪಿಯಾಗಿದ್ದಾನೆ. ಸ್ಯಾಟಲೈಟ್ ನಿಲ್ದಾಣದ ಬಳಿಯ ಕಲಾ ವೈನ್ಸ್ ಬಾರ್ ಒಳಗೆ ಕೊಲೆ ನಡೆದಿದೆ. ಘಟನೆಗೆ ಹಳೆಯ ದ್ವೇಷ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಯಲ್ಲೇ ಕುಡಿಯುತ್ತಿದ್ದ ಸ್ನೇಹಿತನಿಂದಲೇ ಘಟನೆ ನಡೆದಿದೆ.
ಸದ್ಯ ಕೊಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ರಾತ್ರಿ 10.45 ರ ಸುಮಾರಿಗೆ ಘಟನೆ ನಡೆದಿದ್ದು ಆರೋಪಿ ಮತ್ತು ಕೊಲೆಯಾದವನು ಸ್ನೇಹಿತರುಇಬ್ಬರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ
ಹಳೇ ಜಗಳದ ವಿಚಾರದ ತೆಗೆದು ಗಲಾಟೆಯಾಗಿದೆ ಬಾಟಲ್ ನಿಂದ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ ಉಮೇಶ್ (28) ಕೊಲೆ ಆರೋಪಿ ವಶಕ್ಕೆ ಪಡೆಯಲಾಗಿದೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.