ಕೊಡಗು:- 10 ತಿಂಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ದಂಪತಿ ನಡುವೆ ಕಲಹ ಉಂಟಾಗಿ ಗಂಡನನ್ನೇ ಹೆಂಡತಿ ಕೊಂದ ಘಟನೆ ಕೊಡಗಿನಲ್ಲಿ ಜರುಗಿದೆ.
ಪೂರ್ಣಗೊಳ್ಳದ ವೈಟ್ ಟೈಪಿಂಗ್ ಕಾಮಗಾರಿ: ಬೆಂಗಳೂರಿನ ಈ ರಸ್ತೆಯಲ್ಲಿ ಟ್ರಾಫಿಕ್ ಕಿರಿ-ಕಿರಿ!
ಕೊಡಗಿನ ಮೂರ್ನಾಡು ಗಾಂಧಿನಗರದಲ್ಲಿ ಘಟನೆ ಜರುಗಿದೆ. ಧರ್ಮ ಎಂಬ ವ್ಯಕ್ತಿ ಪತ್ನಿಯಿಂದ ಹತ್ಯೆಯಾದ ದುರ್ಧೈವಿ ಎನ್ನಲಾಗಿದೆ. ಕಳೆದ 10 ತಿಂಗಳ ಹಿಂದೆ ಈ ದಂಪತಿ ಪ್ರೀತಿಸಿ ಮದುವೆ ಆಗಿದ್ದರು. ಆದರೂ ಇಬ್ಬರ ನಡುವೆ ಆಗಾಗ ಜಗಳ ಉಂಟಾಗುತ್ತಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಪತಿಗೆ ಚಾಕುವಿನಿಂದ ಇರಿದು ಪತ್ನಿ ಕೊಲೆ ಮಾಡಿದ್ದಾಳೆ.
ಘಟನೆ ಹಿನ್ನೆಲೆ 24 ವರ್ಷದ ಪತ್ನಿ ಶ್ರೀಜಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಮೂರ್ನಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.