ಗದಗ: ಕಿತ್ತೂರು ಉತ್ಸವದ ಹಿನ್ನೆಲೆ ರಾಜ್ಯಾಂಧ್ಯಂತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಗೆ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಚಿವ ಡಾ. ಎಚ್.ಕೆ. ಪಾಟೀಲ್ ಅವರು ಸ್ವಾಗತಿಸಿ ರಥದಲ್ಲಿದ್ದ ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಹಾರ ಅರ್ಪಿಸಿ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ಬಾಲರಾಮನ ದರ್ಶನ ಪಡೆಯಲು ಸೈಕಲ್ ನಲ್ಲಿ ಅಯೋಧ್ಯೆಗೆ ಹೊರಟ ಕರ್ನಾಟಕದ ಯುವಕರು!
ಇದೇ ಸಂದರ್ಭದಲ್ಲಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಬೆಳೆದು ನಿಂತ ಕಸ ಹಾಗೂ ಸುತ್ತಲು ಕಸದ ರಾಶಿಯನ್ನು ಸ್ವಚ್ಚಗೊಳಿಸದ ನಗರಸಭೆ ವಿರುಧ್ಧ ಚೆನ್ನಮ್ಮ ಅಭಿಮಾನಿಗಳು ಹಾಗೂ ಪಂಚಮಸಾಲಿ ಸಮಾಜಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ರು.
ನಾವು ಪದೇ ಪದೇ ಮನವಿ ಮಾಡಿದ್ರೂ ಕೂಡಾ ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ನಿರ್ಲಕ್ಷ ಮಾಡ್ತಿದ್ದಾರೆ, ವೃತ್ತದ ಹಲವು ಟೈಲ್ಸ್ ಗಳು ಕಿತ್ತು ಹೋಗಿವೆ, ವಿದ್ಯತ್ ವೈರ್ ಗಳು ತುಂಡಾಗಿವೆ, ಲೈಟ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಕಾರಂಜಿ ಕೆಟ್ಟು ಹೋಗಿದೆ, ಮೊದಲೇ ಮನವಿ ನೀಡಿದ್ರೂ ಕೂಡಾ ಸ್ವಚ್ಚಗೊಳಿಸೋ ಕಾರ್ಯ ಆಗ್ತಿಲ್ಲ. ಇದು ರಾಷ್ರಮಾತೆ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಮಾಡಿದ ಅವಮಾನ ಅಂತಾ ಕಿಡಿ ಕಾರಿದ್ರು.
ಆಕ್ರೋಶ ವ್ಯಕ್ತವಾಗ್ತಿದ್ದಂತೆ ನಿದ್ದೆಯಿಂದ ಎದ್ದ ನಗರಸಭೆ ಅಧಿಕಾರಿಗಳು ಜ್ಯೋತಿ ಯಾತ್ರೆಗೆ ಚಾಲನೆ ನೀಡುವಾಗಲೇ ಕಸ ವಿಲೇವಾರಿ ಕೈಗೊಂಡು ಸಚಿವರ ಕೆಂಗಣ್ಣಿಗೆ ಗುರಿಯಾದ್ರು.
ಇನ್ನೊಮ್ಮೆ ಈ ರೀತಿ ಆದ್ರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಸಚಿವರು ಎಚ್ಚರಿಕೆ ನೀಡಿದ್ರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಸ್ವಚ್ಚವಾಗಿಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.