ಹುಬ್ಬಳ್ಳಿ: ಇಲ್ಲಿಯ ಸಪ್ನಾ ಬುಕ್ ಹೌಸ್ ಹಾಗೂ ರೋಸ್ಟಮ್ ಡೈರೀಸ್ ಆಶ್ರಯದಲ್ಲಿ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ 2024 ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಚಾಲನೆ ನೀಡಲಾಯಿತು.
ಇಂದಾದ್ರು ಸಿಗುತ್ತಾ ದರ್ಶನ್ ಗೆ ಜಾಮೀನು: ಬೇಲ್ ಸಿಗದಿದ್ದರೆ ಮುಂದೇನು?
ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದಾದ ಚಿತ್ರಕಲಾ ಉತ್ಸವ ಇದಾಗಿದ್ದು, ಕಿರಿಯ ಸಿನಿ ತಾರೆ ಶರ್ವರಿ ಹಾಗೂ ಚಿತ್ರಕಲಾ ಶಿಕ್ಷಕ ಕೆ.ವಿ. ಶಂಕರ ಅವರು ಉದ್ಘಾಟನೆ ನೆರವೇರಿಸಿದರು.
ಸಪ್ನಾ ಬುಕ್ ಹೌಸ್ ಶಾಖಾ ಮುಖ್ಯಸ್ಥ ರಘು ಎಂ.ವಿ., ಮ್ಯಾನೇಜರ್ ಮೇಘನಾ ರಘು ಇದ್ದರು. ಉತ್ಸವದ ಮೇಲ್ವಿಚಾರಕ ಅಭಿಷೇಕ ಬೆಂಡಿಗೇರಿ ಅವರು ಮಾತನಾಡಿ, ಕಲೆಯ ಮಹತ್ವ ತಿಳಿಸುವುದು, ಜನರನ್ನು ಒಟ್ಟುಗೂಡಿಸುವುದು, ಸಾಂಸತಿಕ ಅಂತರ ಕಡಿಮೆ ಮಾಡುವುದು, ಸಮುದಾಯ ಪ್ರಜ್ಞೆ ಮೂಡಿಸುವುದು ಉತ್ಸವದ ಉದ್ದೇಶವಾಗಿದೆ ಎಂದರು.
16ರ ಒಳಗಿನ ಹಾಗೂ 16 ವರ್ಷದ ನಂತರ ಎರಡು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು, ಹುಬ್ಬಳ್ಳಿಯ ಕೋಯಿನ್ ರಸ್ತೆಯ ಲಕ್ಷಿ$п0 ಮಾಲ್ನಲ್ಲಿರುವ ಸಪ್ನಾ ಬುಕ್ ಹೌಸ್ಗೆ ಆಗಮಿಸಿ ಹೆಸರು ನೋಂದಾಯಿಸಿದವರಿಗೆ ಅಗತ್ಯ ಆರ್ಟ್ ಶೀಟ್ ಉಚಿತವಾಗಿ ನೀಡಲಾಗುತ್ತದೆ.
ಅಕ್ಟೋಬರ್ 13ರಿಂದ ನವೆಂಬರ್ 30ರವರೆಗೂ ನೋಂದಾಯಿಸಲು ಅವಕಾಶವಿದೆ. ಡಿಸೆಂಬರ್ 5ರೊಳಗೆ ಚಿತ್ರಕಲೆ ಬಿಡಿಸಿದ ಶೀಟ್ ಕಲಾಕೃತಿ ತಂದು ಒಪ್ಪಿಸಲು ಕಾಲಾವಕಾಶ ನೀಡಲಾಗಿದೆ.
ಯಾವುದೇ ವಿಷಯದ ಮೇಲೆ ಚಿತ್ರ ಬಿಡಿಸಬಹುದು. ಪೆನ್ಸಿಲ್, ಪೋಸ್ಟರ್ ಬಣ್ಣಗಳು, ಜಲವರ್ಣ ಯಾವುದನ್ನಾದರೂ ಬಳಸಬಹುದು. ಸ್ಪರ್ಧೆಯಾಗಿ ಭಾಗಿಯಾದವರ ಕಲಾಕೃತಿಗಳನ್ನು ಆನ್ನೈನ್ ವರ್ಚುವಲ್ ಆರ್ಟ್ ನಲ್ಲಿ ಪ್ರದರ್ಶಿಸಲಾಗುತ್ತದೆ.
ಅನುಭವಿ ಕಲಾವಿದರಿಂದ ಮೌಲ್ಯಮಾಪನ ಮಾಡಿಸಿ ಎರಡೂ ವಿಭಾಗದಲ್ಲಿ ತಲಾ ಮೂರು ನಗದು ಬಹುಮಾನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿಆರ್ಟಫೆಸ್ಟಿವಲ್ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು.