ಆಸೀಸ್ ವಿರುದ್ಧ ಹೀನಾಯ ಸೋಲು ಕಂಡಿರುವ ಭಾರತ ವನಿತೆಯರ ತಂಡವು, ಬಹುತೇಕ ಸೆಮೀಸ್ ಕನಸನ್ನು ನುಚ್ಚು ನೂರು ಮಾಡಿದೆ.
2024ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ನಿನ್ನೆ ನಡೆದ 18ನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಸೆಮಿಫೈನಲ್ ರೇಸ್ನಲ್ಲಿ ಉಳಿಯಬೇಕಾದರೆ ಟೀಂ ಇಂಡಿಯಾ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಾಗಿತ್ತು. ಆದರೆ ಉಭಯ ತಂಡಗಳ ನಡುವೆ ನಡೆದ ಈ ರೋಚಕ ಹಣಾಹಣಿಯಲ್ಲಿ ಹರ್ಮನ್ಪ್ರೀತ್ ಪಡೆ 9 ರನ್ಗಳ ಸೋಲುಂಡಿದೆ. ಈ ಮೂಲಕ ತನ್ನ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ.
PM ನರೇಂದ್ರ ಮೋದಿ ಭೇಟಿ ಮಾಡಿ ವಿಶೇಷ ಬೇಡಿಕೆಯಿಟ್ಟ ಕೇಂದ್ರ ಸಚಿವ ವಿ ಸೋಮಣ್ಣ!
ಇಂದು ನಡೆಯುವ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡ ಸೋಲು ಕಂಡರಷ್ಟೇ ಟೀಂ ಇಂಡಿಯಾಕ್ಕೆ ಕೊನೆಯ ಅವಕಾಶ ಸಿಗಲಿದೆ. ಒಂದು ವೇಳೆ ಪಾಕ್ ವಿರುದ್ಧ ನ್ಯೂಜಿಲೆಂಡ್ ಕೇವಲ ಗೆಲುವು ಸಾಧಿಸಿದರೂ, ಟೀಂ ಇಂಡಿಯಾ ವಿಶ್ವಕಪ್ನಿಂದ ಹೊರಬೀಳಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೀಲಿಯಾ ತಂಡಕ್ಕೆ ಆರಂಭದಲ್ಲಿ ಟೀಂ ಇಂಡಿಯಾ ಬೌಲರ್ಸ್ಗಳು ಶಾಕ್ ನೀಡಿದರು. ಆರಂಭಿಕ ಆಟಗಾರ್ತಿ ಬೆತ್ ಮೂನಿ 2, ನಂತರ ಬಂದ ಜಾರ್ಜಿಯಾ ವಾರೆಹಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಟೀಂ ಇಂಡಿಯಾ ಮೇಲುಗೈ ಸಾಧಿಸಿದರು. ನಂತರ ಬಂದ ನಾಯಕಿ ಮೆಗ್ರಾತ್ ಹಾಗೂ ಆರಂಭಿಕ ಆಟಗಾರ್ತ ಹ್ಯಾರಿಸ್ ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ 4ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇದಾದ ಬಳಿಕ ಬಂದ ಎಲ್ಲಿಸ್ ಪೆರ್ರಿ 32 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಟೀಂ ಇಂಡಿಯಾ ಪರ ರೇಣುಕಾ ಸಿಂಗ್ 2, ದೀಪ್ತಿ ಶರ್ಮಾ 2 ಕನ್ನಡತಿ ಶ್ರೇಯಾಂಕ ಪಾಟೀಲ್, ಪೂಜಾ ವಸ್ತ್ರಕಾರ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
152 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭದಲ್ಲಿ ಶಾಕ್ ಎದುರಾಯಿತು. ಆರಂಭಿಕ ಸ್ಟಾರ್ ಆಟಗಾರ್ತ ಸ್ಮೃತಿ ಮಂದಾನ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಜೆಮಿಮಾ ರೋಡ್ರಿಗಸ್ 16 ರನ್ಗೆ ಆಟ ಮುಗಿಸಿದರೆ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 20 ರನ್ ಗಳಿಸಿ ಪೆವಿಲಿಯ್ ಸೇರಿಕೋಂಡರು. ಇನ್ನೇನು ಟೀಂ ಇಂಡಿಯಾ ಸೋಲು ಖಚಿತ ಎನ್ನುವಾಗ ಕ್ರೀಸ್ ಕಚ್ಚಿ ನಿಂತ ಆಲ್ರೌಂಡರ್ ದೀಪ್ತಿ ಶರ್ಮಾ ಹಾಗೂ ನಾಯಕಿ ಹರ್ಮನ್ಪ್ರಿತ್ ಕೌರ್ 63 ರನ್ಗಳ ಜೊತೆಯಾಟ ಆಡಿದರು. ಇನ್ನೇನು ತಂಡ ಗದ್ದೆ ಬಿಡ್ತು ಎನ್ನುವಾಗ 29 ರನ್ ಗಳಿಸಿದ್ದ ದೀಪ್ತಿ ಶರ್ಮಾ ಔಟ್ ಆದ ಬಳಿಕ ಬಂದ ಯಾವುದೇ ಆಟಗಾರ್ತಿ ಕೂಡ ತಂಡದ ಗೆಲುವಿಗೆ ಹೋರಾಟ ನಡೆಸಲಿಲ್ಲ.
ಒಂದೆಡೆ ನಿರಂತರವಾಗಿ ವಿಕೆಟ್ ಬೀಳ್ತಾ ಇದ್ರೂ ಕೂಡ ಕ್ರಿಸ್ ಕಚ್ಚಿ ಆಡಿದ ನಾಯಕಿ ಹರ್ಮನ್ಪ್ರಿತ್ ಕೌರ್ ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿದರು. ಅಂತಿಮವಾಗಿ ತಂಡದ ಗೆಲುವಿಗೆ ಕೊನೆಯ ಓವರ್ನಲ್ಲಿ 14 ರನ್ ಬೇಕಿದ್ದಾಗ ಕೌರ್ಗೆ ಸ್ಟ್ರೈಕ್ ಕೊಡುವಲ್ಲಿ ಕೂಡ ಯಾವುದೇ ಆಟಗಾರ್ತಿ ಕೂಡ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸುವ ಮೂಲಕ 9 ರನ್ಗಳ ಸೋಲು ಅನುಭವಿಸಿತು.