ಮಹದೇವಪುರ: ಜಮೀನಿನ ವಿಷಯಕ್ಕಾಗಿ ಗೃಹಿಣಿಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಐವರು ಪುಂಡರಗಳ ವಿರುದ್ಧ ಕಾಡುಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈಟ್ ಫೀಲ್ಡ್ ಸಮೀಪದ ಕಾಡುಗುಡಿಯ ವಾಜಪೇಯಿ ರಸ್ತೆಯಲ್ಲಿರುವ ಸೆ. ನಂ. 211/2 ರಲ್ಲಿರುವ 2 ಎಕರೆ 20ಗುಂಟೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಕೇಸ್ ಇದ್ದರು ಸಹ ನಿತ್ಯ ವಿನಾಃ ಕಾರಣ ಸುಹೇಲ್ ಮಸುದ್, ಆಸ್ಟ್ರಂ ಬೆಗ್, ಆನಂದ, ರಘು ಮತ್ತು ಅವರ ಗ್ಯಾಂಗ್ ಜೆಸಿಬಿಯೊಂದಿಗೆ ಅಕ್ರಮಾವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಜಮೀನಿನ ಮಾಲೀಕ ಅಬ್ದುಲ್ ವಾಹಬ್ ಖಾನ್ ಮಾತನಾಡಿ ನಮ್ಮ ಜಾಗದಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ತಂದು ಹಾಕಿ ರಸ್ತೆ ಬಂದ್ ಮಾಡಿ, ಕಂಪೌಂಡ್ ನಿರ್ಮಿಸುತ್ತೆವೆ ಎಂದು ಹೇಳಿ ಇಲ್ಲಸಲ್ಲದ ತೊಂದರೆ ಕೊಡುತ್ತಿದ್ದಾರೆ. ಇಲ್ಲಿನ ಕೆಲ ಮರಗಳನ್ನು ನೆಲಸಮಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ, ನನ್ನ ಮತ್ತು ನನ್ನ ಕುಟುಂಬಸ್ಥರಾದ ಮಫೂಲ್ ಜಾನ್, ಮಮ್ರಾಜ್ ಶಮಿಮ್ ಅವರಿಗೆ ಪುಂಡರು ಹೊಡೆದು ಜೀವ ಬೆದರಿಕೆ ಹಾಕಿ ದೌರ್ಜನ್ನು ಎಸಗುತ್ತಿದ್ದಾರೆ ಎಂದರು.
ಪಿತ್ರಾರ್ಜಿತವಾಗಿ ಬಂದ ಆಸ್ತಿ ನಮಗೆ ಸೇರಿದ್ದು, ಕೆಲ ಸಮಸ್ಯೆಗಳಿಂದ ಈ ವಿಷಯವಾಗಿ ಕೋರ್ಟ್ ಮೊರೆ ಹೋಗಿದ್ದು ಅಂತಿಮ ತೀರ್ಪುಗಾಗಿ ಕಾಯುತ್ತಿದ್ದೆವೆ, ಅಷ್ಟರಲ್ಲಿ ಇಲ್ಲಿನ ಕೆಲ ಕಿಡಿಗೆಡಿಗಳು ಇಲ್ಲಸಲ್ಲದ ಸಮಸ್ಯೆ ಸೃಷ್ಟಿಸಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಈ ಬಗ್ಗೆ ಪೋಲಿಸನವರು ರಕ್ಷಣೆ ನೀಡಬೇಕು ಎಂದು ನೊಂದ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಪೋಲಿಸಿನವರು ಸಹ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ.