ರಾಯಚೂರು:- ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ ಅವಘಡ ಸಂಭವಿಸಿದ್ದು, ಕಾಲುವೆಯಲ್ಲಿ ತಾಯಿ ಮಗಳು ಕೊಚ್ಚಿ ಹೋದ ಘಟನೆ ಜರುಗಿದೆ.
ಎಡಿಜಿಪಿ ಚಂದ್ರಶೇಖರ್ ದೂರಿನ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು!?
ತಾಲೂಕಿನ ಬಿ.ಯದ್ಲಾಪೂರ ಗ್ರಾಮದಲ್ಲಿ ಘಟನೆ ಜರುಗಿದೆ. 27 ವರ್ಷದ ಸುಜಾತಾ, ಹಾಗೂ 10 ವರ್ಷದ ಶ್ರಾವಣಿ ಮೃತ ದುರ್ದೈವಿಗಳು.
ತಾಯಿ ಮೃತದೇಹ ಪತ್ತೆಯಾಗಿದೆ. ಸಧ್ಯ ಮಗಳು ಶ್ರಾವಣಿ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಪ್ರತಿ ದಿನದಂತೆ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.