ಇಂದಿನ ದಿನಮಾನದಲ್ಲಿ ಕಾಲ್ ರೆಕಾರ್ಡ್ ಮಾಡಿಟ್ಟುಕೊಳ್ಳುವುದು ಒಂದು ಅಗತ್ಯವೇ ಆಗಿದೆ. ಸಂಭಾಷಣೆಯೊಂದರ ವಿಷಯಗಳನ್ನು ಮತ್ತೆ ತಿಳಿಯುವುದಕ್ಕಾಗಿ, ಕೇಳಿದ ಪಠ್ಯವನ್ನು ಪುನರ್ ಮನನ ಮಾಡುವುದಕ್ಕಾಗಿ ಸೇರಿದಂತೆ ಇನ್ನೂ ಹಲವಾರು ಕಾರಣಗಳಿಗಾಗಿ ಕಾಲ್ ರೆಕಾರ್ಡ್ ಮಾಡುವುದು ಮುಖ್ಯವಾಗುತ್ತದೆ. ಆಂಡ್ರಾಯ್ಡ್ ಹಾಗೂ ಐಫೋನ್ಗಳಲ್ಲಿ ವಾಟ್ಸಾಪ್ ವಾಯ್ಸ್ ಕಾಲ್ ಹೇಗೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ವಾಟ್ಸ್ಆ್ಯಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ನೋಡೋಣ.
- ಮೊದಲು, ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು “ಕಾಲ್ ರೆಕಾರ್ಡರ್: ಕ್ಯೂಬ್ ಎಸಿಆರ್” ಅಪ್ಲಿಕೇಶನ್ ಸರ್ಚ್ ಮಾಡಿ.
- ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಒಮ್ಮೆ ಇನ್ಸ್ಟಾಲ್ ಆದ ಬಳಿಕ ಅಪ್ಲಿಕೇಶನ್ ತೆರೆಯಿರಿ.
- ಈಗ ವಾಟ್ಸ್ಆ್ಯಪ್ಗೆ ಹೋಗಿ ಮತ್ತು ಯಾರಿಗಾದರೂ ಕರೆ ಮಾಡಿ ಅಥವಾ ಬಂದ ಕರೆಯನ್ನು ಸ್ವೀಕರಿಸಿ.
- ಕರೆ ಸಮಯದಲ್ಲಿ, ನೀವು “ಕ್ಯೂಬ್ ಕಾಲ್” ನ ವಿಜೆಟ್ ಅನ್ನು ನೋಡುತ್ತೀರಿ. ಅದನ್ನು ಡಿಸ್ಪ್ಲೇ ಮೇಲೆ ನೋಡದಿದ್ದರೆ, ಕ್ಯೂಬ್ ಕಾಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಧ್ವನಿ ಕರೆಗಳಿಗಾಗಿ “ಫೋರ್ಸ್ VoIP ಕರೆ” ಆಯ್ಕೆಯನ್ನು ಆಯ್ಕೆಮಾಡಿ.
- ನಂತರ ಈ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ವಾಟ್ಸ್ಆ್ಯಪ್ ವಾಯ್ಸ್ ಕರೆಯನ್ನು ರೆಕಾರ್ಡ್ ಮಾಡುತ್ತದೆ.
- ಹೀಗೆ ರೆಕಾರ್ಡ್ ಆದ ಆದ ಕಾಲ್ಗಳು ನಿಮ್ಮ ಮೊಬೈಲ್ನ ಆಂತರಿಕ ಮೆಮೊರಿಯಲ್ಲಿ ಆಡಿಯೋ ಫೈಲ್ ರೂಪದಲ್ಲಿ ಇರುತ್ತದೆ.
ಎಚ್ಚರ ವಹಿಸಿ:
ನೀವು ಯಾವುದೇ ಒಂದು ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವ ಮುನ್ನ ಎಚ್ಚರಬಹಿಸಬೇಕು. ಯಾಕಂದ್ರೆ ಈ ಥರ್ಡ್ ಪಾರ್ಟಿ ಆ್ಯಪ್ಗಳು ನಿಮ್ಮ ಫೋನ್ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಹಾಗೆಯೆ, ಯಾರೊಬ್ಬರ ಫೋನ್ ಕರೆಯನ್ನು ರೆಕಾರ್ಡ್ ಮಾಡುವ ಮುನ್ನ ಯೋಚಿಸಿ. ಅವರ ಅನುಮತಿ ಪಡೆದು ರೆಕಾರ್ಟ್ ಮಾಡಿದರೆ ಉತ್ತಮ.