ಬೆಂಗಳೂರಿನ ಟೀ ವ್ಯಾಪಾರಿಯೊಬ್ಬರ ಖಾತೆಗೆ ಬರೋಬ್ಬರಿ 999 ಕೋಟಿ ರೂಪಾಯಿ ಜಮೆ ಆಗುವ ಮೂಲಕ ವ್ಯಾಪಾರಿಗೆ ಶಾಕ್ ನೀಡಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ಟೀ,ಕಾಫಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಎಸ್.ಪ್ರಭಾಕರ್ ಎಂಬುವವರ ಖಾತೆಗೆ ಬರೋಬ್ಬರಿ 999 ಕೋಟಿ ರೂಪಾಯಿ ಜಮೆಯಾಗಿದೆ.
ಸೆಂಟ್ರಲ್ ಬ್ಯಾಂಕ್ ಆ ಇಂಡಿಯಾದಲ್ಲಿ ಖಾತೆಯನ್ನು ಹೊಂದಿರುವ ಪ್ರಭಾಕರ್ ಖಾತೆಗೆ 999 ಕೋಟಿ ರೂಪಾಯಿ ಹಣ ಜಮೆಯಾಗಿರುವ ಮೆಸೇಜ ಬಂದಾಗ ಮೊದಲಿಗೆ ಯಾವುದೋ ಫೇಕ್ ಮೆಸೇಜ್ ಎಂದುಕೊಂಡಿದ್ದರು. ನಂತರ ಪರಿಶೀಲಿಸಿದಾಗ ಹಣ ಜಮೆಯಾಗಿರೋದು ದೃಢಪಟ್ಟಿತ್ತು. ಆದರೆ ಹಣ ಜಮೆಯಾದ ಮರುಕ್ಷಣವೇ ಪ್ರಭಾಕರ್ ಖಾತೆಯನ್ನು ಬ್ಯಾಂಕಿನವರು ಸ್ಥಗಿತ ಗೊಳಿಸಿದ್ದಾರೆ.
ತಮ್ಮ ಬ್ಯಾಂಕ್ ಖಾತೆಗೆ ಇಷ್ಟೊಂದು ಹಣ ಬಂದಿದ್ದು ನೋಡಿ ಪ್ರಭಾಕರ್ ಶಾಕ್ ಆಗಬೇಕಾ ಅಥವಾ ಖುಷಿ ಪಡಬೇಕಾ ಎಂದುಕೊಳ್ಳುವಷ್ಟರಲ್ಲೇ ಬ್ಯಾಂಕ್ ಸಿಬ್ಬಂದಿ ಅವರ ಖಾತೆಯನ್ನು ಸೀಜ್ ಮಾಡಿದ್ದಾರೆ. ಹೀಗಾಗಿ ಇದೇ ಖಾತೆಯ ನೆರವಿನಿಂದ ಎಲ್ಲ ಆನ್ಲೈನ್ ವಹಿವಾಟು ನಡೆಸುತ್ತಿರುವ ಪ್ರಭಾಕರ್ ಅವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ಸಂಭವಿಸಿದ್ದು, ತಪ್ಪು ಅರಿವಾದ ಕೂಡಲೇ ಪ್ರಭಾಕರ್ ಖಾತೆ ಫ್ರೀಝ್ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಿದ್ದಾರೆ. ಪ್ರಭಾಕರ್ ತಾವು ಮಾಡದ ತಪ್ಪಿಗೆ ಉದ್ಯೋಗವನ್ನು ಬಿಟ್ಟು ಬ್ಯಾಂಕಿಗೆ ಅಲೆದಾಡುವಂತಾಗಿದೆ. ದಸರಾ, ಶನಿವಾರ-ಭಾನುವಾರದ ಕಾರಣಕ್ಕೆ ಸಾಲು ಸಾಲು ರಜೆ ಇರುವ ಕಾರಣ ಪ್ರಕರಣ ನಡೆದು ಮೂರು ದಿನವಾದರೂ ಅವರ ಖಾತೆ ಸಕ್ರಿಯಗೊಂಡಿಲ್ಲ.