ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಸಿದ್ದಾರ್ಥ ವಿಹಾರ್ ಟ್ರಸ್ಟ್ ಸಿಎ ನಿವೇಶನವನ್ನ KIADBಗೆ ಖರ್ಗೆ ಕುಟುಂಬ ವಾಪಸ್ ನೀಡಿದೆ. 5 ಎಕರೆ ಸಿಎ ನಿವೇಶನ (CA Site) ಹಂಚಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಅಂತ ಆರೋಪ ಮಾಡಿದ್ರು. ಇಷ್ಟೇ ಅಲ್ಲದೇ ರಾಜ್ಯಪಾಲರಿಗೂ ದೂರು ನೀಡಿದ್ರು. ವಿವಾದದಿಂದ ಎಚ್ಚೆತ್ತಿರೋ ಸಿದ್ದಾರ್ಥ ವಿಹಾರ್ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ನಿವೇಶನ ವಾಪಸ್ ನೀಡಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ನೀಡಿದ್ದ 5 ಎಕರೆ ಸಿಎ ನಿವೇಶನ ವಾಪಸ್ ನೀಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಮೊದಲ ದಿನದಿಂದ ನಾವು ಹೇಳ್ತಿದ್ದೇವೆ. ತರಾತುರಿಯಲ್ಲಿ, ಕಾನೂನು ಬಾಹಿರವಾಗಿ ಹಂಚಿಕೆ ಆಗಿಲ್ಲ. ಬಿಜೆಪಿ ಅವರು ಸುಮ್ಮನೆ ಆರೋಪ ಮಾಡಿದ್ರು. ಅದಕ್ಕೆ ನಾವು ಡಿಫೆಂಡ್ ಮಾಡಿಕೊಂಡ್ವಿ. ರಾಹುಲ್ ಖರ್ಗೆ ಬಗ್ಗೆ ಬಿಜೆಪಿ ಅವರಿಗೆ ಅರಿವಿರಲಿಲ್ಲ. ಅರಿವು ಬಂದ ಕೂಡಲೇ ಬಿಜೆಪಿ (BJP) ಮಾತಾಡೋದು ಬಿಟ್ಟಿದ್ದಾರೆ. ರಾಹುಲ್ ಖರ್ಗೆ ಅವರ ವಿದ್ಯಾರ್ಹತೆ ನೋಡಿದ ಬಳಿಕ ಬಿಜೆಪಿ ಅವರು ಮಾತಾಡುತ್ತಿಲ್ಲ ಎಂದಿದ್ದಾರೆ.