ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ ಗೆ ಬೆನ್ನು ನೋವು ಉಲ್ಬಣಗೊಂಡಿದ್ದು, ಈಗಾಗಲೇ ಜೈಲು ವೈದ್ಯರು ಹಾಗೂ ಹೊರಗಿನಿಂದಲೂ ಬಂದಿದ್ದ ವೈದ್ಯರು ತಪಾಸಣೆ ನಡೆಸಿದ್ದಾರೆ.
ಹೀಗಿದ್ದರೂ ಚಿಕಿತ್ಸೆಗೆ ಒಪ್ಪದೆ ನಟ ದರ್ಶನ್ ನೋವಿನಲ್ಲೇ ಇದ್ದಾನೆ. ಎಮ್ಆರ್ಐ ಸ್ಕ್ಯಾನ್, ಸಿಟಿ ಸ್ಕ್ಯಾನೂ ಯಾವುದು ಬೇಡ ,ನಾನೂ ಎಲ್ಲೂ ಹೋಗಲ್ಲ ಅಂತಿದ್ದರಂತೆ. ವೈದ್ಯರು ನಟ ದರ್ಶನ್ಗೆ ಆಪರೇಷನ್ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೂ ಒಪ್ಪದೆ ಚಿಕಿತ್ಸೆಗೆ ನಿರಾಕರಿಸುತ್ತಿದ್ದರಂತೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ಇಷ್ಟು ಬೆನ್ನು ನೋವಿಗೆ ಯಾತನೆ ಅನುಭವಿಸಿದ್ದರೂ ಚಿಕಿತ್ಸೆ ಬೇಡ ಅಂತಿರೋದ್ಯಾಕೆ ಎಂದು ಜೈಲಾಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಳ್ಳಾರಿ ಜೈಲಾಧಿಕಾರಿಗಳು ತಂದಿದ್ದಾರೆ. ಮುಂದಿನ ಬಾರಿ ಕುಟುಂಬಸ್ಥರು ಬಂದಾಗ ಚಿಕಿತ್ಸೆ ಬಗ್ಗೆ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದೆ ಎಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.