ಕಲಘಟಗಿ: ಮಹಾನವಮಿ ಹಬ್ಬ ಬಂದ್ರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಒಂಬತ್ತು ದಿನಗಳು ದಿನಕ್ಕೊಂದು ಬಣ್ಣದ ಸೀರೆ ತೊಟ್ಟು ತಾಯಿ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸೋದು ವಿಶೇಷ. ಒಂಬತ್ತು ದಿನಗಳು ಮಹಿಳೆಯರು ಮುಂಜಾನೆ ಬೇಗ ಎದ್ದು ಮನೆಯ ಮುಂದೆ ಕಸ ಗುಡಿಸಿ ರಂಗೋಲಿ ಹಾಕಿ ಮಡಿಯಿಂದ ಆರತಿಯನ್ನು ಹಿಡಿದು ದೇವಸ್ಥಾನಕ್ಕೆ ತೆರಳುವುದು ವಿಶೇಷವಾಗಿದೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ಕಲಘಟಗಿ ಪಟ್ಟಣದ ಪ್ರಮುಖ ದೇವಸ್ಥಾನಗಳಾದ ದ್ಯಾಮವ್ವನ ಗುಡಿ ದೇವಸ್ಥಾನ ಹಾಗೂ ಶ್ರೀ ಕಾಳಿಕಾ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದ ಪೂಜಾ ಕಾರ್ಯಕ್ರಮ ಜರುಗಿದವು. ಕೊನೆಯ ದಿನದಂದು ಮಹಿಳೆಯರು ದೇವಿಗೆ ಉಡಿ ತುಂಬಿ ಪರಸ್ಪರ ಉಡಿ ತುಂಬಿಕೊಂಡು ಪೂಜೆ ಸಲ್ಲಿಸುವುದು ಸಂಭ್ರಮ ಸಡಗರ .
ವರದಿ : ಮಾರುತಿ ಲಮಾಣಿ ಕಲಘಟಗಿ