ಬಿಗ್ ಬಾಸ್ ಸೀಸನ್ 11ರ ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರಕ್ಕೆ ಜಗದೀಶ್ ತುಸು ಮೆತ್ತಗಾಗಿದ್ದಾರಾದರೂ ಸ್ಪರ್ಧಿಗಳ ಮೇಲೆ ಆರ್ಭಟ ನಿಲ್ಲಿಸಿಲ್ಲ. ಉಗ್ರಂ ಮಂಜು, ಸುರೇಶ್, ಹಂಸ ಸೇರಿದಂತೆ ಇತರರ ಮೇಲೆ ತಮ್ಮ ಆರ್ಭಟ ಮುಂದುವರೆಸಿದ್ದರು. ಆದರೆ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್ನಲ್ಲಿ ಜಗದೀಶ್ ಅಚಾನಕ್ಕಾಗಿ ಭಾವುಕರಾದರು. ಕಷ್ಟಪಟ್ಟು ಕಣ್ಣೀರು ತಡೆದುಕೊಂಡರು.
ಆಗಿದ್ದಿಷ್ಟು, ಮನೆಯ ಎಲ್ಲ ಸದಸ್ಯರಿಗೆ ಹೊರಗಡೆಯಿಂದ ಉಡುಗೊರೆಗಳು ಬಂದವು. ಜಗದೀಶ್ಗೆ ಯಾರೂ ಊಹಿಸದ ರೀತಿ ಹೃದಯ ಉಡುಗೊರೆಯಾಗಿ ಬಂತು ಅದರ ಜೊತೆಗೆ ಕೆಂಪು ಬಣ್ಣದ ಬನಿಯನ್ ಮತ್ತು ಚಡ್ಡಿ ಸಹ ಬಂತು. ಇದನ್ನು ನೋಡಿ ಸ್ವತಃ ಜಗದೀಶ್ ಆಶ್ಚರ್ಯಪಟ್ಟರು. ಜೊತೆಗೆ ಪಾಸಿಟಿವ್ ಆದ ಸಂದೇಶ ಉಡುಗೊರೆಯ ಜೊತೆಗೆ ಬಂದಿತ್ತು. ‘ಕಂಟೆಂಟ್ ಕ್ರಶ್’ ಆಗಿದ್ದೀರ ಎಂದು ಸಂದೇಶದಲ್ಲಿತ್ತು. ಇದನ್ನು ನೋಡಿ ಜಗದೀಶ್ ಬಹಳ ಖುಷಿ ಪಟ್ಟರು. ಇಂಥಹಾ ಒಂದು ಒಳ್ಳೆಯ ಮಾತುಗಳು ನಾನು ಕೇಳಿಯೇ ಇರಲಿಲ್ಲ ಎಂದರು ಜಗದೀಶ್.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಡಾಕ್ಟರ್ ಹೇಳಿದ ಸುದ್ದಿ ಮತ್ತಷ್ಟು ನಡುಕ ಹುಟ್ಟಿಸಿದೆ
ನಾನು ಹೊರಗೆ ಸದಾ ವಿವಾದ ಅದು ಇದು ಎಂದು ಇದ್ದವನು. ನನ್ನೊಳಗು ಒಬ್ಬ ಮಗು ಇದ್ದಾನೆ ಎಂದು ತೋರಿಸೋಣ ಎಂದೇ ಇಲ್ಲಿಗೆ ಬಂದಿದ್ದೆ’ ಎಂದರು ಜಗದೀಶ್. ‘ಇಲ್ಲಿಗೆ ಬಂದ ಮೇಲೆ ನಾನು ಹೊರಗೆ ಏನೆಲ್ಲ ಮಾಡಬಹುದಿತ್ತು, ಏನೆಲ್ಲ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ. ಇಲ್ಲಿ ಕೆಲವರಿಗೆ ನೇಲ್ ಪಾಲಿಶ್ ಹಾಕಿದೆ. ಆದರೆ ಎಂದಿಗೂ ನಾನು ನನ್ನ ಪತ್ನಿಗೆ ನೇಲ್ ಪಾಲಿಶ್ ಹಾಕಿಲ್ಲ. ನಾನು ಯಾಕೆ ನನ್ನ ಪತ್ನಿಯೊಂದಿಗೆ ಹೀಗೆ ಇರಲಿಲ್ಲ ಎಂದು ನನಗೆ ಬೇಸರ ಆಯ್ತು. ನಾನು ಆಕೆಗೆ ಮೋಸ ಮಾಡಿದೆನಾ ಎಂದೆಲ್ಲ ಅನ್ನಿಸಲು ಶುರುವಾಯ್ತು’ ಎಂದು ಉಮ್ಮಳಿಸಿ ಬಂದ ದುಃಖವನ್ನು ತಡೆಹಿಡಿದರು ಜಗದೀಶ್.
ಜಗದೀಶ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್, ‘ಊಟದ ಎಲೆಯ ರೀತಿ ಬಿಗ್ಬಾಸ್ ಮನೆಯಲ್ಲಿ ಇರಬೇಕಾಗುತ್ತದೆ. ಇಲ್ಲಿ ಕೇವಲ ಒಂದೇ ಎಮೋಷನ್ ಇದ್ದರೆ ಸರಿ ಆಗುವುದಿಲ್ಲ. ಇಲ್ಲಿ ಸಿಟ್ಟು ಇರಬೇಕು, ಕೋಪವೂ ಇರಬೇಕು, ನಗು, ಭಾವುಕತೆ ಎಲ್ಲವೂ ಇರಬೇಕು. ಹೇಗೆ ಎಲೆಯಲ್ಲಿ ಎಲ್ಲವೂ ಇದ್ದರೆ ಸರಿಯಾದ ಊಟ ಎನಿಸಿಕೊಳ್ಳುತ್ತದೆಯೋ ಹಾಗೆ’ ಎಂದು ಉದಾಹರಣೆ ಸಹಿತ ವಿವರಿಸಿದರು.