ಕಲಘಟಗಿ( ಧಾರವಾಡ): ನಾಡಿನ ಎಲ್ಲೆಡೆ ನವರಾತ್ರಿ ದೇವಿಯನ್ನು ಆರಾಧಿಸುವ ಹಬ್ಬ ನವರಾತ್ರಿ. ದಸರಾ ಹಬ್ಬಕ್ಕೆ ಅಷ್ಟೊಂದು ಕಳೆ ಬಂದಿಲ್ಲ ಈ ವರ್ಷ. ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಅವಕೃಪೆಯಿಂದ ದಸರಾ ಹಬ್ಬಕ್ಕೆ ಗೃಹಣ ಹಿಡಿದಿದೆ.
ರಾಜ್ಯದಲ್ಲಿರುವ ದುಷ್ಟಶಕ್ತಿ ಸಿಎಂ ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ!
ನವರಾತ್ರಿ ಅಂದರೆ 9 ನವರಾತ್ರಿಗಳು ದೇವಿಯ ಒಂಬತ್ತು ವಿವಿಧ ರೂಪವನ್ನು ಆರಾಧಿಸಲಾಗುತ್ತದೆ. ಶೈಲ ಪುತ್ರಿ, ಬ್ರಹ್ಮಚಾರಿ, ಚಂದ್ರಘಂಟಾ, ಕೂಷ್ಮಾoಡ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿ ಧಾತ್ರಿ, ಹತ್ತನೆಯ ದಿನ ‘ವಿಜಯ ದಶಮಿ’ ಈ ದಿನ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಶಮಿ (ಬನ್ನಿ) ಯನ್ನು ವಿನಿಯೋಗಿಸಿ ಮನೆಯಲ್ಲಿ ಹಿರಿಯರಿಗೆ ಹಾಗೂ ತಂದೆ ತಾಯಿ, ಅಕ್ಕ-ತಂಗಿ, ಅತ್ತೆ ಮಾವ, ಅಣ್ಣ-ತಮ್ಮಂದಿರುಗಳಿಗೆ ನಾವು ನೀವು ಬನ್ನಿ ಕೊಟ್ಟು ಬಂಗಾರದ ಹಾಗೆ ಇರೋಣ ಎನ್ನುವ ಪ್ರತೀತಿಯ ಮುಖಾಂತರ ಕರ್ನಾಟಕದಲ್ಲಿ ಆಚರಣೆಯಲ್ಲಿದೆ. ಇದನ್ನ ಕರುನಾಡಿನಲ್ಲಿ ಸಹ ಅತ್ಯಂತ ವಿಜೃಂಭಣೆಯಿಂದ ಸಹ ಆಚರಿಸಲಾಗುತ್ತಿದೆ. ಆದರೆ ಈ ವರ್ಷ ವಾಡಿಕೆಗಿಂತ ಅಧಿಕ ಮಳೆ ಆಗಿದ್ದರಿಂದ ರೈತಾಪಿ ಜನರು ಇದ್ದ ಬಿದ್ದ ಬೆಳೆ ಕಳೆದುಕೊಂಡಿದ್ದಾರೆ.
ಈ ಭಾಗದಲ್ಲಿ ದೇವಸ್ಥಾನಗಳಲ್ಲಿ ಪುರಾಣ ಪ್ರವಚನ, ದಾಸೋಹ,ಭಜನೆ, ಡೊಳ್ಳು, ಗಿಂಡಿ ಉತ್ಸವ ನಿರಂತರ 9 ದಿನಗಳ ಕಾಲ ನಡೆಯುತ್ತವೆ. ವಿಜಯದಶಮಿಯ ದಿನದಂದು ಪಟ್ಟಣದ ಗ್ರಾಮದೇವಿ ಭಜನಾ ಸಂಘ, ಬೆಂಡಿಗೇರಿ ಓಣಿಯ ಸಂತ ಮಂಡಳಿ, ಸೂರ್ಯವಂಶ ಕ್ಷತ್ರಿಯ ಸಮಾಜದ ದಿಂಡಿ ಉತ್ಸವ, ಕುಂಬಾರ ಓಣಿಯ ಭಜನೆ, ಬ್ರಾಹ್ಮಣ ಸಮಾಜದವ ರಿಂದ ವೆಂಕಟೇಶ್ವರ ದೇವಸ್ಥಾನದ ರಥಯಾತ್ರೆ ನಿತ್ಯ ಉತ್ಸವ ಕಾರ್ಯಕ್ರಮ,
ಶ್ರೀ ದುರ್ಗಾದೇವಿ ಭಜನಾ ಸಂಘ ಅಂಬೇಡ್ಕರ್ ನಗರ, ಕಾಳಿಕಾದೇವಿ ಉತ್ಸವ ವಿಶ್ವಕರ್ಮ ಸಮಾಜದವರಿಂದ. ಅನೇಕ ಓಣಿಯ ಅವರಿಂದ ಸೇವಾ ಕಾರ್ಯಕ್ರಮ ನಡೆಯುತ್ತಿದ್ದು ಸಡಗರದ ನವರಾತ್ರಿ ಹಬ್ಬವನ್ನು ಪರಂಪರೆಯಾಗಿ ಊರಿನ ಗುರುಹಿರಿಯರು ಪವಿತ್ರ ಗ್ರಂಥಗಳನ್ನು ಪುಸ್ತಕ ಚಿನ್ನ ಬೆಳ್ಳಿ ನಾಣ್ಯ ನೋಟುಗಳು ಪೂಜೆಗೆ ಇಡಲಾಗುತ್ತದೆ ಹಾಗೂ ನವಮಿ ಎಂದು ಆಯುಧಗಳನ್ನು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದು ಕರೆಯುತ್ತಾರೆ. ಆದರೆ ಈ ವರ್ಷ ಜನರಲ್ಲಿ ಹಬ್ಬ ಆಚರಣೆಗೆ ಸೂಗಸು ಕಂಡುಬರಲಿಲ್ಲ.
ಬೆಲೆ ಏರಿಕೆಯ ಬಿಸಿ ಎಲ್ಲರಿಗೂ ತಟ್ಟಿದ್ದರಿಂದ ಪದಾರ್ಥಗಳು,ಹಣ್ಣು ಹಂಪಲುಗಳು.ವೀಳ್ಯದೆಲೆ, ಪ್ರತಿಯೊಂದು ಬಳಕೆಯಾಗುವ ಸಾಮಗ್ರಿಗಳ ಬೆಲೆ ಗಗನಕ್ಕೆ ತಲುಪಿದೆ.