ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು ಸಂಭವಿಸಿ ಹೋಗುತ್ತದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಎಂದು ವೈದ್ಯರು ಎಚ್ಚರಿಕೆ ನೀಡ್ತಾರೆ.
ನೀವು ಚಹಾ ಪ್ರಿಯರಾ!? ಹಾಗಿದ್ರೆ 1 ತಿಂಗಳು ಕುಡಿಯೋದು ಬಿಟ್ಟುಬಿಡಿ; ಆಮೇಲೆ ನೋಡಿ!
ಹೃದಯಾಘಾತದ ಲಕ್ಷಣಗಳು:
ಎದೆ ನೋವು ಅಥವಾ ಒತ್ತಡ: ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆಯಲ್ಲಿ ತೀವ್ರವಾದ ಒತ್ತಡ, ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ದೇಹದ ಬೇರೆ ಬೇರೆ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ರಮೇಣ ನೋವು ಭುಜಗಳು, ಕುತ್ತಿಗೆ ಮತ್ತು ಕೆಲವೊಮ್ಮೆ ಬೆನ್ನಿಗೆ ಹರಡುತ್ತದೆ.
ಭುಜ ಮತ್ತು ತೋಳಿನಲ್ಲಿ ನೋವು: ತೋಳು ಮತ್ತು ಭುಜದ ನೋವು ಕೂಡ ಹೃದಯಾಘಾತದ ಒಂದು ಲಕ್ಷಣ. ನೊವು ಬೆನ್ನು ಮತ್ತು ಇತರ ಭಾಗಗಳಿಗೂ ಹರಡುತ್ತದೆ. ಈ ರೀತಿಯ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಂಗಿಲ್ಲ.
ಉಸಿರಾಟದ ತೊಂದರೆ: ಹೃದಯಾಘಾತ ಸಂಭವಿಸಿದಾಗ ವ್ಯಕ್ತಿಯು ನರಗಳ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟಕ್ಕೆ ತೊಂದರೆ ಆಗುತ್ತದೆ. ಇದು ಹೃದಯಾಘಾತದ ಎರಡನೇ ಸಾಮಾನ್ಯ ಲಕ್ಷಣ.
ತಲೆತಿರುಗುವಿಕೆ, ಅಹಿತಕರ ಭಾವನೆ: ಹೃದಯಾಘಾತದ ಲಕ್ಷಣ ಕೆಲವೊಮ್ಮೆ ಗೊತ್ತೇ ಆಗಲ್ಲ. ಸೌಮ್ಯವಾದ (ಮೈಲ್ಡ್) ರೋಗ ಲಕ್ಷಣಗಳನ್ನೂ ಹೊಂದಿರುತ್ತದೆ. ತಲೆ ತಿರುಗುವಿಕೆ ಅಥವಾ ಅನಾನುಕೂಲತೆಯಂತಹ ರೋಗಲಕ್ಷಣಗಳಲ್ಲೂ ಸಂಭವಿಸುತ್ತದೆ.
ಬೆವರುವಿಕೆ ಮತ್ತು ಆಯಾಸ: ಹೃದಯಾಘಾತದ ಸಂದರ್ಭದಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬೆವರು ಶುರುವಾಗುತ್ತದೆ. ತುಂಬಾ ಸುಸ್ತಾದ ಅನುಭವ ಆಗುತ್ತದೆ. ಕೆಲವರು ನಡುಗಲು ಶುರು ಮಾಡ್ತಾರೆ. ಇದು ಕೂಡ ಹೃದಯಾಘಾತದ ಲಕ್ಷಣಗಳಾಗಿರಬಹುದು.
ವಾಕರಿಕೆ ಮತ್ತು ವಾಂತಿಯಂತಹ ಭಾವನೆ: ಹೃದಯಾಘಾತದ ಸಂದರ್ಭದಲ್ಲಿ ಅನೇಕ ಬಾರಿ ವಾಕರಿಕೆ ಮತ್ತು ಸ್ವಲ್ಪ ವಾಂತಿ ಪ್ರಾರಂಭವಾಗುತ್ತದೆ. ಕೆಲವರಿಗೆ ಹೊಟ್ಟೆನೋವಿನ ಸಮಸ್ಯೆಯೂ ಬರಬಹುದು. ಹೊಟ್ಟೆ ಮತ್ತು ಹೃದಯದ ನರಗಳ ನಡುವಿನ ಸಂಪರ್ಕವೇ ಇದಕ್ಕೆ ಕಾರಣ. ಹೃದಯದಲ್ಲಿ ಸಮಸ್ಯೆ ಉಂಟಾದಾಗ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದ
ಈ ರೋಗಲಕ್ಷಣಗಳಲ್ಲಿ ಯಾವುದಾದರು ಒಂದು ಕಾಣಿಸಿಕೊಂಡರೂ ಅದು ಹೃದಯಕ್ಕೆ ಸಂಬಂಧಿಸಿದ್ದರಬಹುದು.