ಲಕ್ನೋ:- ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರೇಯಸಿ ಜೊತೆ ಲಾಂಗ್ಡ್ರೈವ್ ಹೋಗಲು ಕಾರಿಲ್ಲದೇ ಪರದಾಡುತ್ತಿದ್ದ ಸ್ನೇಹಿತನಿಗಾಗಿ, ಕಾರು ಕಳ್ಳತನ ಮಾಡಿ ಫ್ರೆಂಡ್ಸ್ ಸಹಾಯ ಮಾಡಿರುವ ಘಟನೆ ಜರುಗಿದೆ.
ತುಷಾರ್ ಗಿರಿನಾಥ್ ಹೆಸರಲ್ಲಿ ನಕಲಿ ಫೇಸ್ಬುಕ್: ಸೈಬರ್ ವಂಚಕರ ವಿರುದ್ಧ FIR ದಾಖಲು!
ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಎಂದು ಗುರುತಿಸಲಾಗಿದೆ. ಆದರೆ ಈ ಮೂವರ ಪೈಕಿ ಕಾರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಕಳ್ಳತನದ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇಬ್ಬರು ಕಾಲೇಜು ವಿದ್ಯಾರ್ಥಿಗಳು ಅವರ ಸ್ನೇಹಿತ ಹಾಗೂ ಆತನ ಪ್ರೇಯಸಿಯೊಟ್ಟಿಗೆ ಲಾಂಗ್ಡ್ರೈವ್ ತೆರಳಲು ಕಾರಿಲ್ಲದೇ ಇದ್ದಾಗ ಸಹಾಯ ಮಾಡಲು ಮುಂದಾಗಿದ್ದರು. ಗ್ರೇಟರ್ ನೋಯ್ಡಾದ ಶೋರೂಮ್ ಒಂದರಲ್ಲಿ ಕಾರನ್ನು ಕಳ್ಳತನ ಮಾಡುವ ಯೋಜನೆ ಹಾಕಿದ್ದರು.
ಸೆ.26 ರಂದು ಇಬ್ಬರು ಆರೋಪಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್ನಲ್ಲಿ ನಿಲ್ಲಿಸಿದ್ದ ಹುಂಡೈ ವೆನ್ಯೂ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೇಳಿದ್ದಾರೆ. ಈ ವೇಳೆ ಕಾರ್ ಡೀಲರ್ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್ನಿಂದ ಹೊರತೆಗೆದು ಇಬ್ಬರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರ್ ಡೀಲರ್ ಕಾರನ್ನು ಓಡಿಸುತ್ತಿದ್ದ. ಇಬ್ಬರಲ್ಲಿ ಒಬ್ಬ ಮುಂದೆ ಹಾಗೂ ಇನ್ನೊಬ್ಬ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ. ಬಳಿಕ ಕಾರು ಅಲ್ಲಿಂದ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.