ಬೆಂಗಳೂರು :- ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಆನ್ಲೈನ್ ರಮ್ಮಿ ಗೀಳಿಗೆ ಬಿದ್ದು 20 ಲಕ್ಷ ಕಳೆದುಕೊಂಡ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಲ ತೀರಿಸಲಾಗದೇ ಮನೆಬಿಟ್ಟು ಹೋದ ಘಟನೆ ಜರುಗಿದೆ.
RCB ಫ್ಯಾನ್ಸ್ ಗೆ ಸಿಹಿಸುದ್ದಿ: ತಂಡಕ್ಕೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್!?
ಭರತ್, ನಾಪತ್ತೆಯಾದವನು ಎನ್ನಲಾಗಿದೆ. ಇತ ಆನ್ಲೈನ್ ರಮ್ಮಿ ಆಡಲು ಬ್ಯಾಂಕ್ನಿಂದ 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಇಎಮ್ಐ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ.
ಹೌದು, ಸೆಲ್ಪೀ ವಿಡಿಯೋ ಮಾಡಿರುವ ಭರತ್ ‘ನಾನು ಜೀವನದಲ್ಲಿ ಸೋತಿದ್ದೇನೆ. ನನ್ನನ್ನು ಹುಡುಕಬೇಡಿ. ನಾನು ಮನೆಬಿಟ್ಟು ಹೋಗುತ್ತಿದ್ದೇನೆಂದು ವಿಡಿಯೋ ಮಾಡಿ, ಮೊಬೈಲ್ ಮನೆಯಲ್ಲೇ ಬಿಟ್ಟು ಭರತ್ ತೆರಳಿದ್ದಾನೆ. ಸದ್ಯ ಭರತ್ ಪತ್ನಿ ಚೈತ್ರಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಹೇಗಾದರೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.