ಬಿಳಿ ಜೋಳದ ಬೆಲೆ ಏಕಾಏಕಿ ಕುಸಿತ ಕಂಡಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ನ್ಯಾಮತಿ-ಹೊನ್ನಾಳಿ ತಾಲೂಕುಗಳ ರೈತರಿಗೆ ಭ್ರಮನಿರಸನವಾಗಿದೆ. ನಾಲ್ಕು ತಿಂಗಳ ಹಿಂದಷ್ಟೇ ಕ್ವಿಂಟಾಲ್ಗೆ 8 ಸಾವಿರ ರೂ. ಇದ್ದ ಜೋಳದ ಬೆಲೆ 3,500 ರೂ.ಗೆ ದಿಢೀರ್ ಕುಸಿತ ಕಂಡಿದೆ
ಕಳೆದ ವರ್ಷ ಗರಿಷ್ಠಮಟ್ಟಕ್ಕೆ ತಲುಪಿದ್ದ ಬಿಳಿಜೋಳ ಬೆಲೆ ಈಗ ಇಳಿಮುಖ ಕಂಡಿದ್ದು, ಹಿಂದಿನ ವರ್ಷ ಅಕ್ಟೋಬರ್ನಲ್ಲಿ ಗರಿಷ್ಠ 7000 ರೂ. ಏರಿದ್ದ ಬೆಲೆ ಈ ವರ್ಷ ಸರಾಸರಿ ಬೆಲೆ 3400 ರೂ.ಗೆ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ಸಮಾಧಾನ ತಂದಿದೆ.
ನಾಡಿಗೆ ಅನ್ನ ನೀಡುವ ಭತ್ತದ ಕಣಜ ವಿಷದ ಕಣಜವಾಗುತ್ತಿದ್ಯಾ?: ರೈತರಲ್ಲಿ ಮೂಡಿದ ಆತಂಕ!
ಕಳೆದ ವರ್ಷ ಎಪಿಎಂಸಿಯಲ್ಲಿ ಬಿಳಿಜೋಳ ಕೊರತೆಯಿಂದ ಕಲಬುರಗಿಗೆ ಮಹಾರಾಷ್ಟ್ರದಿಂದ ಬಿಳಿಜೋಳ ಆವಕ ಆಗಿದ್ದರಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಒಂದು ಕೆಜಿಗೆ 90 ರೂ.ವರೆಗೂ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಕಡಿಮೆಯಿದೆ”
ಹಿಂದಿನ ವರ್ಷ ಬಿಳಿಜೋಳದ ಅಭಾವ ಹೆಚ್ಚಿದ್ದರಿಂದ ಮಹಾರಾಷ್ಟ್ರದಿಂದ ಬಿಳಿಜೋಳ ಆಮದು ಆಗಿ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ, ಈ ವರ್ಷ ಆ ಸಮಸ್ಯೆ ಉದ್ಭವಿಸಿಲ್ಲ. ಗ್ರಾಹಕರಿಗೆ ಬೇಕಾದಷ್ಟು ಜೋಳ ಪ್ರಸ್ತುತ ಮಾರುಕಟ್ಟೆಗಳಲ್ಲಿ ಲಭ್ಯ ಇರುವುದರಿಂದ ಬಿಳಿ ಜೋಳದ ರೇಟ್ ಜಾಸ್ತಿಯಾಗಿಲ್ಲ.
ಎಪಿಎಂಸಿಯಲ್ಲಿ ಪ್ರಸ್ತುತ ಬಿಳಿ ಜೋಳ ಬೆಲೆ ಪ್ರಸ್ತುತ ಬೆಂಬಲ ಬೆಲೆಗಿಂತ ಹೆಚ್ಚೇ ಇದೆ. ಜವಾರಿ ಜೋಳಕ್ಕೆ 3225 ರೂ. ಹೈಬ್ರಿಡ್ ಬಿಳಿಜೋಳಕ್ಕೆ 3180 ರೂ. ಬೆಂಬಲ ಬೆಲೆಯಿದೆ. ಮಾರುಕಟ್ಟೆಯಲ್ಲಿ 3400ರೂ.ವರೆಗೆ ಮಾರಾಟ ಆಗುತ್ತಿದೆ. ಹಿಂಗಾರು ಬೆಳೆ ಆಗಿದ್ದರಿಂದ ಆವಕ ಕಡಿಮೆ ಇರುತ್ತದೆ”