ಬೆಂಗಳೂರು:- ಹೃದಯಾಘಾತದಿಂದ ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ಉದಯ ಟಿವಿ ಅಧ್ಯಕ್ಷ ಸೆಲ್ವಂ ವಿಧಿವಶರಾಗಿದ್ದಾರೆ.
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರ ಭಾರೀ ಕುಸಿತ, ಇಂದೇ ಹೋಗಿ ಖರೀದಿಸಿ!
84 ವರ್ಷದ ಸೆಲ್ವಂ ಅವರು, ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿ, ಉದಯ ಟಿವಿ ಅಧ್ಯಕ್ಷರಾಗಿದ್ದಂತವರು. ನಿನ್ನೆ ಬೆಳಿಗ್ಗೆ ಸಂಭವಿಸಿದ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇನ್ನೂ ಅವರ ಅಗಲಿಕೆಯಿಂದ ಪತ್ರಿಕೋದ್ಯಮ ಸೇರಿ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ.
ನಿನ್ನೆ ದಿಢೀರ್ ಅಂತ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸೆಲ್ವಂ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಕನ್ನಡಮ್ಮನ ಸೇವೆ ಮಾಡುತ್ತಾರೆ ನನ್ನಂತಹ ನೂರಾರು ಮಂದಿಗೆ ಅನ್ನದಾತರಾಗಿದ್ದ ಸೆಲ್ವಂ ಸರ್ ಇನ್ನಿಲ್ಲವಾಗಿದ್ದಾರೆ.