ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನದ ದರ ಭಾರೀ ಕುಸಿತ ಕಂಡಿದೆ. ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ.
ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಭಾರೀ ನಿರಾಸೆ ಮೂಡಿಸಿತ್ತು. ಯಾವಾಗಲೂ ಬಂಗಾರದ ಬೆಲೆ ಒಂದೇ ರೀತಿ ಇರೋದಿಲ್ಲ. ಬದಲಿಗೆ ಒಮ್ಮೆ ಏರಿಕೆಯಾದ್ರೆ ಮತ್ತೊಮ್ಮೆ ಇಳಿಕೆ ಆಗುತ್ತದೆ. ರೇಟ್ ಕಡಿಮೆ ಆದ ಕೂಡಲೇ ಚಿನ್ನ ಖರೀದಿ ಮಾಡಲೇಬೇಕು ಎಂದು ಗೃಹಿಣಿಯರು ಕಾಯುತ್ತಲೇ ಇರುತ್ತಾರೆ. ಈಗ ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ.
ಬೆಂಗಳೂರಲ್ಲಿ ಇಂದು 22 ಕ್ಯಾರಟ್ ಗೋಲ್ಡ್ ರೇಟ್ ಒಂದು ಗ್ರಾಮ್ಗೆ 7,030 ರೂ. ಇದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲೂ ಒಂದು ಗ್ರಾಮ್ ಚಿನ್ನದ ಬೆಲೆ ಕ್ರಮವಾಗಿ 7,030 ರೂ. ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮಾತ್ರ ಚಿನ್ನದ ಬೆಲೆ 7,045 ರೂ. ಆಗಿದೆ. ಇಷ್ಟೇ ಅಲ್ಲ ಪ್ರತಿ ಗ್ರಾಮ್ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,752 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,030 ರೂ. ಇದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) ಮಾತ್ರ 7,669 ರೂ. ಇದೆ.
ಸದ್ಯ ಚಿನ್ನ ಖರೀದಿಗೆ ಇದು ಒಳ್ಳೆಯ ಸಮಯ. ಹಾಗಾಗಿ ಜನ ಬಂಗಾರದ ಅಂಗಡಿ ಮುಂದೆ ಕ್ಯೂ ಕಟ್ಟಿ ನಿಂತಿದ್ದಾರೆ