ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಸಿಕಂದರಾಬಾದ್ – ವಾಸ್ಕೋ ನಡುವೆ ಸಂಚರಿಸುವ ರೈಲು, ಅಕ್ಟೋಬರ್ 09, 2024 ರಿಂದ ಬಳ್ಳಾರಿ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸುತ್ತಿದ್ದು, ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲು ಪ್ರಯಾಣಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ.
ಇದರ ಜೊತೆಗೆ ಬೆಳಗಾವಿ – ಮಣಗೂರು (ಭದ್ರಾಚಲಂ) ನಡುವೆ ರೈಲು ಸಂಚಾರ ಒದಗಿಸಬೇಕೆಂಬ ಸಚಿವರ ಮನವಿಯ ಮೇರೆಗೆ ದಿನಾಂಕ 16/10/2024 ರಿಂದ ರೈಲು ಸಂಚಾರ ಪ್ರಾರಂಭಿಸುವುದಾಗಿ ರೈಲ್ವೇ ಇಲಾಖೆ ಸೂಚಿಸಿದೆ. ಭದ್ರಾಚಲಂ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದ್ದು, ಈ ರೈಲು ವಾರದಲ್ಲಿ 4 ದಿನಗಳಲ್ಲಿ ಸಂಚರಿಸಲಿರುವುದರಿಂದ ಉತ್ತರ ಕರ್ನಾಟಕದ ಜನತೆಗೆ ಬಹಳ ಅನುಕೂಲಕರವಾಗಲಿದೆ.
ಪ್ರಸ್ತಾವನೆಗೆ ಸ್ಪಂದಿಸಿ ಈ ಎರಡೂ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ರೈಲ್ವೇ ಸಚಿವ ಶ್ರೀ ಅಶ್ವಿನಿ ವೈಷ್ಣವ
ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ರೈಲ್ವೇ ಸಚಿವಾಲಯದ ಅಧಿಕಾರಿ ವರ್ಗದವರಿಗೆ ಧನ್ಯವಾದಗಳನ್ನು ಸಚಿವ ಹೇಳಿದ್ದಾರೆ.