ನಾಡಿಗೆ ಅನ್ನ ನೀಡುವ ಇದೇ ಭತ್ತದ ಕಣಜ ವಿಷದ ಕಣಜವಾಗುತ್ತಿದ್ದು, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಇಲ್ಲಿ ಬೆಳೆಯುವ ಭತ್ತವೇ ಕಾರಣವಾಗುತ್ತಿದೆಯಾ ಅನ್ನೋ ಆತಂಕ ಆರಂಭವಾಗಿದೆ. ಇದೇ ಆತಂಕವನ್ನು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯದ ಅನೇಕ ಅಧಿಕಾರಿಗಳು ಮತ್ತು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಈ ಬಾಗದ ಜನರಲ್ಲಿ ಹೆಚ್ಚಾಗುತ್ತಿವೆ. ಹೆಚ್ಚಿನ ಜನರು ಈಗಾಗಲೇ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಸೇರಿದಂತೆ ಖಾಯಿಲೆಗಳು ಹೆಚ್ಚಾಗಲು ಕಾರಣ, ಹೆಚ್ಚಿನ ಭತ್ತದ ಇಳುವರಿಯನ್ನು ಪಡೆಯಲು ಬಹುತೇಕ ರೈತರು ಬಳಸುತ್ತಿರುವ ಅತಿಯಾದ ರಾಸಾಯನಿಕ ಮತ್ತು ಕ್ರಿಮಿನಾಶಕಗಳೇ ಕಾರಣ ಅಂತ ಹೇಳಲಾಗುತ್ತಿದೆ.
ರೈತರಿಗೆ ಬಂಪರ್ ಆಫರ್: ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ, ಕೆಜಿಗೆ 666 ರೂಗೆ ಏರಿಕೆ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿರುವ ರೈತರಿಗೆ ಒಂದು ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲು, ಕೃಷಿ ವಿಜ್ಞಾನಿಗಳು ಸರಿಸುಮಾರು ನಾಲ್ಕು ಬ್ಯಾಗ್ ಯುರಿಯಾ, ಎರಡು ಬ್ಯಾಗ್ ಡಿಎಪಿ, ಎರಡು ಬ್ಯಾಗ್ ಪೋಟ್ಯಾಷ್ ಬಳಕೆ ಮಾಡಬಹುದು ಅಂತ ಹೇಳುತ್ತಾರೆ. ಆದರೆ, ಈ ಭಾಗದಲ್ಲಿ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಗೊಬ್ಬರವನ್ನು ರೈತರು ಬಳಸುತ್ತಿದ್ದಾರಂತೆ. ಇನ್ನು ಒಂದು ಎಕರೆಗೆ ಹತ್ತು ಮಿಲಿ ಲೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಿ ಅಂತ ಹೇಳಿದ್ದರೆ, ಒಂದು ಎಕರೆಗೆ ಇಪ್ಪತ್ತರಿಂದ ಮೂವತ್ತು ಮಿಲಿ ಲೀಟರ್ ಕ್ರಿಮಿನಾಶಕವನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ನಾವು ತಿನ್ನುವ ಆಹಾರ ವಿಷವಾಗುತ್ತಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂವಿ ರವಿ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಕೇವಲ ಗಂಗಾವತಿ ತಾಲೂಕೊಂದರಲ್ಲಿಯೇ ಆರವತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಈ ವರ್ಷ ಮಾರಾಟವಾಗಿದೆ ಎಂದಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು. ಇದು ಎಷ್ಟರ ಮಟ್ಟಿಗೆ ರಾಸಾಯನಿಕ ಗೊಬ್ಬರವನ್ನು ರೈತರು ಭತ್ತ ಬೆಳೆಯಲು ಬಳಸುತ್ತಿದ್ದಾರೆ ಅನ್ನೋದಕ್ಕೆ ಪುಷ್ಟಿ ನೀಡುತ್ತಿದೆ. ಇನ್ನು ಹೆಚ್ಚಿನ ರಾಸಾನಿಯಕ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಈ ಬಾಗದಲ್ಲಿನ ಜನರಲ್ಲಿ ಹೆಚ್ಚಾಗುತ್ತಿವೆ. ಕ್ಯಾನ್ಸರ್ ಇದೇ ಕಾರಣದಿಂದ ಬಂದಿದೆ ಅಂತ ಹೇಳಲಿಕ್ಕಾಗದೇ ಇ್ದರೂ ಕೂಡಾ, ಈ ಒಂದು ಕಾರಣದಿಂದ ಕೂಡಾ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.