ಟೀಮ್ ಇಂಡಿಯಾ ನಾಯಕರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಭಾರತದ ಹೆಮ್ಮೆಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. 86 ವರ್ಷದ ರತನ್ ಟಾಟಾ ಬುಧವಾರ (ಅಕ್ಟೋಬರ್ 9) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ
Ratan Tata: ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮ ಯಾವುದು ಗೊತ್ತಾ?
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಟ್ವಿಟರ್ ಗೋಡೆಯ ಮೇಲೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಮಿಸ್ಟರ್ ರತನ್ ಟಾಟಾ ತಮ್ಮ ಜೀವನದುದ್ದಕ್ಕೂ, ಇದೀಗ ಸಾವಿನಲ್ಲೂ ದೇಶವನ್ನು ಸ್ಥಳಾಂತರಿಸಿದ್ದಾರೆ. ಅವರೊಂದಿಗೆ ಸಮಯ ಕಳೆಯುವ ಭಾಗ್ಯ ನನಗೆ ಸಿಕ್ಕಿತ್ತು, ಆದರೆ ಅವರನ್ನು ಭೇಟಿಯಾಗದ ಲಕ್ಷಾಂತರ ಜನರು ಇಂದು ನಾನು ಅನುಭವಿಸುವ ಅದೇ ದುಃಖವನ್ನು ಅನುಭವಿಸುತ್ತಾರೆ. ಅವನ ಪ್ರಭಾವವೇ ಹಾಗೆ. ಪ್ರಾಣಿಗಳ ಮೇಲಿನ ಪ್ರೀತಿಯಿಂದ ಲೋಕೋಪಕಾರದವರೆಗೆ, ತಮ್ಮನ್ನು ತಾವು ಕಾಳಜಿ ವಹಿಸುವ ಸಾಧನವಿಲ್ಲದವರನ್ನು ನಾವು ಕಾಳಜಿ ವಹಿಸಿದಾಗ ಮಾತ್ರ ನಿಜವಾದ ಪ್ರಗತಿಯನ್ನು ಸಾಧಿಸಬಹುದು ಎಂದು ಅವರು ತೋರಿಸಿದರು. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ, ಮಿಸ್ಟರ್ ಟಾಟಾ. ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ,” ಎಂದು ಮಾಸ್ಟರ್ ಬ್ಲಾಸ್ಟರ್ ಬರೆದುಕೊಂಡಿದ್ದಾರೆ.
ಭಾರತದಲ್ಲಿನ ಕೈಗಾರಿಕೋದ್ಯಮ ಅಭಿವೃದ್ಧಿಯಲ್ಲಿ ರತನ್ ನವಲ್ ಟಾಟಾ ಅವರ ಕೊಡುಗೆ ಅಪಾರ. ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿದ್ದ ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕಾರಣ ಬುಧವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರತನ್, ಹಲವಾರು ಉನ್ನತ ಸ್ವಾಧೀನಗಳ ಮೂಲಕ ಟಾಟಾ ಸಮೂಹ ಸಂಸ್ಥೆಯನ್ನು ಜಾಗತಿಕ ಶಕ್ತಿಯಾಗಿ ಪರಿವರ್ತಿಸಲು ಕಾರಣರಾದರು. ಹೀಗಾಗಿ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದು, ಶ್ರದ್ಧಾಂಜಲಿ ಅರ್ಪಿಸಿದೆ. ಭಾರತದ ಟೆಸ್ಟ್ ಕ್ರಿಕೆಟ್ ತಂಡ ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನಾತ್ಮಕ ಟಿಪ್ಪಣಿ ಬರೆದು, ರತನ್ ಅವರನ್ನು ‘ಚಿನ್ನದ ಹೃದಯ ಹೊಂದಿರುವ ವ್ಯಕ್ತಿ’ (ಮ್ಯಾನ್ ವಿತ್ ಗೋಲ್ಡನ್ ಹಾರ್ಟ್) ಎಂದು ಕರೆದಿದ್ದಾರೆ.
ಚಿನ್ನದ ಹೃದಯ ಹೊಂದಿರು ವ್ಯಕ್ತಿ. ಸರ್ ಸರ್, ನೀವು ನಿಜವಾಗಿಯೂ ಎಲ್ಲರ ಬಗ್ಗೆ ಕಾಳಜಿವಹಿಸುವ ಮತ್ತು ಎಲ್ಲರನ್ನೂ ಉತ್ತಮ ಸ್ಥಿತಿಗೆ ಕೊಂಡೊಯ್ಯಲು ತನ್ನ ಜೀವನವಿಡೀ ಶ್ರಮಿಸಿದ ವ್ಯಕ್ತಿಯಾಗಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತೀರಿ,” ಎಂದು ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.