ಗದಗ: ತಂಗಿಯ ಜೊತೆ ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣ ಪ್ರೀತಿ ಮಾಡಿದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಗದಗ ನಗರದ ಧೋಬಿ ಘಾಟ್ ಬಳಿ ಅಕ್ಟೋಬರ್ 6 ರಂದು ತಡ ರಾತ್ರಿ ನಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ 5 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಕರೆಸಿ ಬುದ್ಧಿ ಹೇಳಲಾಗಿತ್ತು. ವಾರ್ನಿಂಗ್ ಕೊಟ್ಟಿದ್ದರು ಜಾಫರ್ ಪ್ರೀತಿ ಕಡಿಮೆಯಾಗಿರಲಿಲ್ಲ. ಪ್ರೇಮ ಮುಂದುವರೆದಿತ್ತು. ಇದರಿಂದ ರೊಚ್ಚಿಗೆದ್ದ ರುಹಾನ್ ತನ್ನ ತಂಗಿಯ ಪ್ರಿಯತಮನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದನು.
ಮೊದಲಿಗೆ ಅಕ್ಟೋಬರ್ 6 ರಂದು ರಾತ್ರಿ ಟೀ ಸ್ಟಾಲ್ ಬಳಿ ನಿಂತಿದ್ದ ಜಾಫರ್ ಜೊತೆ ರುಹಾನ್ಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರುಹಾನ್ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದನು. ಆರೋಪಿ ರುಹಾನ್ ಹಾಗೂ ದಾದಾಪೀರ್ ಸೇರಿ ಕೊಲೆಗೆ ಯತ್ನಿಸಿದ್ದಾರೆ. ಪ್ರಮುಖ ಆರೋಪಿ ರುಹಾನ್, 2ನೇ ಆರೋಪಿ ದಾದಾಪೀರ್ನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.