ನ್ಯೂಯಾರ್ಕ್:- ನ್ಯೂಯಾರ್ಕ್ನಲ್ಲಿ ಟರ್ಕಿಶ್ ಏರ್ಲೈನ್ಸ್ ತುರ್ತು ಭೂಸ್ಪರ್ಶ ಉಂಟಾಗಿರುವ ಹಿನ್ನೆಲೆ, ಪೈಲಟ್ ಸಾವನ್ನಪ್ಪಿದ ಘಟನೆ ಜರುಗಿದೆ.
TA Sharavana: ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ: ಟಿ.ಎ. ಶರವಣ
ಮಂಗಳವಾರ ರಾತ್ರಿ ಸಿಯಾಟಲ್ನಿಂದ 204 ಫ್ಲೈಟ್ ಟೇಕ್ ಆಫ್ ಆದ ನಂತರ ಪೈಲಟ್ ಇಲ್ಸೆಹಿನ್ ಪೆಹ್ಲಿವಾನ್, ಪ್ರಜ್ಞೆ ಕಳೆದುಕೊಂಡರು. ಟರ್ಕಿಶ್ ಏರ್ಲೈನ್ಸ್ ವಕ್ತಾರ ಯಾಹ್ಯಾ ಉಸ್ತುನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಕ್ಷಣವೇ ಚಿಕಿತ್ಸೆ ಸಿಕ್ಕರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ನಂತರ ಮತ್ತೋರ್ವ ಪೈಲಟ್ ಮತ್ತು ಸಹ-ಪೈಲಟ್ ನಿಯಂತ್ರಣವಹಿಸಿಕೊಂಡು ನ್ಯೂಯಾರ್ಕ್ನಲ್ಲಿ ವಿಮಾನ ಕೆಳಗಿಳಿಸಿದರು.
ಬುಧವಾರ ಬೆಳಗ್ಗೆ 6 ಗಂಟೆಯ ಮೊದಲು ವಿಮಾನವು ನ್ಯೂಯಾರ್ಕ್ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನವು ಸಿಯಾಟಲ್ನಿಂದ ಹೊರಟ ಎಂಟು ಗಂಟೆಗಳ ನಂತರ ನ್ಯೂಯಾರ್ಕ್ನಲ್ಲಿ ಇಳಿಯಿತು. ಪೆಹ್ಲಿವಾನ್ ಅವರು 2007 ರಿಂದ ಟರ್ಕಿಶ್ ಏರ್ಲೈನ್ಸ್ನಲ್ಲಿ ಮಾಡುತ್ತಿದ್ದಾರೆ.
ಪ್ರಯಾಣಿಕರು ನ್ಯೂಯಾರ್ಕ್ನಿಂದ ತಮ್ಮ ಸ್ಥಳಗಳಿಗೆ ತಲುಪಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏರ್ಲೈನ್ ವಕ್ತಾರರು ತಿಳಿಸಿದ್ದಾರೆ.
ಪೈಲಟ್ ಸಾವಿಗೆ ಕಾರಣ ತಿಳಿದುಬಂದಿಲ್ಲ.