ಹುಬ್ಬಳ್ಳಿ: ಅರ್ಬನ್ ಓಯಾಸಿಸ್ ಈಗ ಭಾರತದ ಮುಂಚೂಣಿಯ ಆಟೋಟೆಕ್ ಸೂಪರ್ ಆ್ಯಪ್ ಆದ ಪಾರ್ಕನೊಂದಿಗೆ ಕೈಗೂಡಿಸಿ ಸರಳಗೊಳಿಸಲಾದ ಕಾರ್ ಪಾರ್ಕ್ ನ್ ಅನುಭವವನ್ನು ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಸಾದರಪಡಿಸುತ್ತಿದೆ. ಕಾರು ಮಾಲೀಕರು ತಮ್ಮ ಕಾರುಗಳಲ್ಲಿ ಫಾಸ್ಟಾö್ಯಗ್ ಬಳಸಿಕೊಂಡು ಅವರ ಕಾರ್ ಪಾರ್ಕ್ ನ ಶುಲ್ಕವನ್ನು ಪಾವತಿ ಮಾಡಲು ಈಗ ಸಾಧ್ಯವಾಗಲಿದೆ ಎಂದು ಪಾರ್ಕಿಂನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಅಮಿತ್ ಲಕೋಟಿಯ ಅವರು ತಿಳಿಸಿದರು.
ಗದಗ: ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನೆ: BY ವಿಜಯೇಂದ್ರ ವಿಸಿಟ್!
ಈ ಕುರಿತು ಮಾಹಿತಿ ನೀಡಿದ ಅವರು, ಪಾರ್ಕ್ ನ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ, ಕನಿಷ್ಟ ಮಾನವ ಹಸ್ತಕ್ಷೇಪ ಇಲ್ಲಿರಲಿದ್ದು, ಕಾಯುವ ಸಮಯದಲ್ಲಿ ಬಹಳಷ್ಟು ಇಳಿಕೆಯಾಗಲಿದೆ. ಜೊತೆಗೆ ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್ಗೆ ಭೇಟಿ ನೀಡುವ ಕಾರು ಮಾಲೀಕರಿಗೆ ನಿಜಕ್ಕೂ ಡಿಜಿಟಲ್ ಅನುಭವದ ಖಾತ್ರಿಯನ್ನು ಇದು ಮಾಡಿಕೊಡಲಿದೆ.
ಈ ವ್ಯವಸ್ಥೆಯಿಂದ ಕಾರ್ ಮಾಲೀಕರು ತಮ್ಮ ಕಾರುಗಳನ್ನು ಪಾರ್ಕಿಂಗ್ ಪ್ರದೇಶದ ಒಳಗೆ ಚಾಲನೆ ಮಾಡಿಕೊಂಡು ಬಂದಾಗ ಪಾರ್ಕ್ ವ್ಯವಸ್ಥೆ ಅವರ ಪ್ರವೇಶದ ಸಮಯವನ್ನು ಡಿಜಿಟಲ್ ಕ್ರಮದಲ್ಲಿ ದಾಖಲಿಸುತ್ತದೆ. ಕಾರು ಮಾಲೀಕರು ನಿರ್ಗಮಿಸುವಾಗ ಪಾರ್ಕಿಂಗ್ ಶುಲ್ಕಗಳನ್ನು ಕಾರ್ನಲ್ಲಿರುವ ಫಾಸ್ಟಾö್ಯಗ್ನಿಂದ ಪಡೆದುಕೊಳ್ಳಲಾಗುತ್ತದೆ ಎಂದರು