ದಶಭುಜ ಎಂದೂ ಕರೆಯಲ್ಪಡುವ ದೇವಿ ದುರ್ಗೆಯನ್ನು ಅವಳ 10 ಕೈಗಳಲ್ಲಿ 10 ಆಯುಧಗಳೊಂದಿಗೆ ಚಿತ್ರಿಸಲಾಗಿದೆ. ಪ್ರತಿಯೊಂದು ಆಯುಧವು ಆಳವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ.
BBK11: ಯಾವ ಸೀಮೆ ಕ್ಯಾಪ್ಟನ್ ರಿ ನೀವು: ಹಂಸಾ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು!
ದೇವಿ ದುರ್ಗೆಯ 10 ಆಯುಧಗಳ ಉದ್ದೇಶ ಕೇವಲ ರಾಕ್ಷಸರನ್ನು ಕೊಲ್ಲುವುದಕ್ಕೆ ಮಾತ್ರವಲ್ಲ. ಪ್ರತಿಯೊಂದು ಆಯುಧವು ತನ್ನದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದೆ.
ತಾಯಿ ದುರ್ಗೆಯು 10 ಕೈಗಳಲ್ಲಿ 10 ರೀತಿಯ ಆಯುಧ ಹಿಡಿದು ನಿಂತ ಶಕ್ತಿಯ ಸುಂದರ ರೂಪವನ್ನು ನೀವು ಬಹಳಷ್ಟು ಬಾರಿ ಕಣ್ತುಂಬಿಕೊಂಡಿರಬಹುದು. ಆದರೆ, ಎಂದಾದರೂ ಅಷ್ಟೊಂದು ಆಯುಧಗಳನ್ನು ಆಖೆಯ ಹಿಡಿದಿರುವುದೇಕೆ, ಅವು ಏನನ್ನು ಸಂಕೇತಿಸುತ್ತವೆ, ಅವುಗಳ ಪ್ರಾಮುಖ್ಯತೆ ಏನು ಎಂದು ಯೋಚಿಸಿದ್ದೀರಾ?
ತಾಯಿ ದುರ್ಗೆ ಅಂದರೆ ಅಪರಿಮಿತ ಶಕ್ತಿ. ಆಕೆ ಶಕ್ತಿಯು ಸರ್ವೋಚ್ಚ ದೈವಿಕ ರೂಪ. ದುಷ್ಟರನ್ನು ನಾಶಮಾಡಲು ಮತ್ತು ಜಗತ್ತಿನಲ್ಲಿ ಸದ್ಗುಣ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ದೇವಿ ಸದಾ ಸಜ್ಜಾಗಿರುತ್ತಾಳೆ. ದುರ್ಗಾ ದೇವಿ ಎಂದರೆ ಆಕೆ ಅನೇಕ ದೇವರುಗಳ ಸಂಯೋಜಿತ ಶಕ್ತಿಗಳೊಂದಿಗೆ ಅವತರಿಸಲ್ಪಟ್ಟವಳು. ಹಾಗಾಗಿ, ಆಕೆಯ ಶಕ್ತಿ ಎಲ್ಲ ದೇವರಿಗಿಂತಲೂ ಅಪರಿಮಿತವಾಗಿದೆ. ಹಾಗಾಗಿಯೇ ಅವಳನ್ನು ಸರ್ವಶಕ್ತೆ ಎನ್ನುವುದು. ಅಷ್ಟೇ ಅಲ್ಲ, ಆಕೆ ಎಲ್ಲ ದುಃಖವನ್ನು ನಿವಾರಿಸುವ ದುರ್ಗತಿನಾಶಿನಿ ಕೂಡಾ.
ಮಹಿಷಾಸುರನೆಂಬ ರಾಕ್ಷಸನನ್ನು ಸಂಹರಿಸಲು ತಮ್ಮಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತು ದೇವತೆಗಳು, ಒಟ್ಟುಗೂಡಿ ದುರ್ಗಾ ದೇವಿಯನ್ನು ಬೇಡಿಕೊಂಡಾಗ ಸೃಷ್ಠಿಯಾದವಳೆ ಚಾಮುಂಡಿ. ಸೃಷ್ಠಿಯಾದ ಸಮಯದಲ್ಲಿ ದೇವಾನು ದೇವತೆಗಳು ಚಾಮುಂಡಿಗೆ ತಮ್ಮ ಅತ್ಯಂತ ಶಕ್ತಿಶಾಲಿ ಆಯುಧಗಳನ್ನು ನೀಡಿದರು. ಆ ಆಯುಧಗಳು ಕೇವಲ ಭೌತಿಕ ಶಕ್ತಿಯಾಗಿರದೆ, ದೈವಿಕ ಸದ್ಗುಣಗಳು ಮತ್ತು ಶಕ್ತಿಗಳ ಸಾಂಕೇತಿಕ ನಿರೂಪಣೆಗಳಾಗಿದ್ದವು.
ತ್ರಿಶೂಲವನ್ನು ಮಹಾ ಶಿವನು ನೀಡಿದ್ದಾನೆ. ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾಗಿರುವ ತ್ರಿಶೂಲವನ್ನು ಯಾವಗಲೂ ತನ್ನ ಬಲಗೈಯಲ್ಲಿ ಇಟ್ಟುಕೊಂಡಿರಲಿದ್ದು, ಇದು ಧೈರ್ಯ ಮತ್ತು ಕೆಟ್ಟದ್ದನ್ನು ನಾಶಮಾಡುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.
ಸುದರ್ಶನ ಚಕ್ರವನ್ನು ಮಹಾ ವಿಷ್ಣು ನೀಡಿದ್ದು, ಇದು ಶತ್ರುಗಳನ್ನು ಸರ್ವ ನಾಶಮಾಡುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಇದನ್ನು ಶ್ರೀ ಕೃಷ್ಣನು ಬಳಸಿದ್ದರು.
ಶಂಖವು ‘ಓಂ’ ಎಂಬ ಕಾಸ್ಮಿಕ್ ಶಬ್ದದ ಸಂಕೇತವಾಗಿದ್ದು ವರುಣ ದೇವನು ನೀದಿದ್ದ, ಸೃಷ್ಟಿ ಮತ್ತು ವಿಜಯದ ಸಾರವನ್ನು ಸೂಚಿಸುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಶುದ್ಧೀಕರಿಸಲು ಸಹ ಸಹಾಯ ಮಾಡುತ್ತದೆ.
ಗದೆಯು ಶಕ್ತಿಯನ್ನು ಸಂಕೇತಿಸುವುದರಿಂದ ಆಂಜನೇಯನು ನೀಡಿದ್ದರು.. ಅಹಂಕಾರ ಮತ್ತು ಅಜ್ಞಾನವನ್ನು ಹತ್ತಿಕ್ಕುವ ಸಾಮರ್ಥ್ಯವನ್ನು ಪ್ರತಿನಿಧಿಸುವುದರೊಂದಿಗೆ, ನ್ಯಾಯ ಮತ್ತು ಸದಾಚಾರವನ್ನು ತರುತ್ತದೆ. ರಾಮಾಯಣದಲ್ಲಿ ಹನುಮಂತನು ರಾವಣನ ರಾಕ್ಷಸ ಸೈನ್ಯವನ್ನು ಸೋಲಿಸಲು ಗದೆಯನ್ನೆ ಆಯ್ಕೆ ಮಾಡಿಕೊಂಡಿದ್ದರು.
ವಾಯು ದೇವನು ಚಾಮುಂಡಿಗೆ ಬಿಲ್ಲು ಮತ್ತು ಬಾಣವನ್ನು ನೀಡಿದ್ದು, ಬಿಲ್ಲು ಶಕ್ತಿಯನ್ನು ಸಂಕೇತಿಸಿದರೆ, ಬಾಣಗಳು ಗಮನ ಮತ್ತು ಉದ್ದೇಶವನ್ನು ಪ್ರತಿನಿಧಿಸುತ್ತವೆ.
ಮರಣ ಮತ್ತು ನ್ಯಾಯವನ್ನು ಪ್ರತಿನಿಧಿಸುವ ಖಡ್ಗವನ್ನು ಪ್ರಥಮ ಪೂಜಿಪ ಗಣೇಶನು ಚಾಮುಂಡಿಗೆ ನೀಡಿದ್ದರು. ಜೀವನವನ್ನು ಸಾವಿನ ಚಕ್ರದಿಂದ ಬೇರ್ಪಡಿಸಲು ಸಹಾಯ ಮಾಡುವ ಪರಶು ಆಸ್ತ್ರವನ್ನು ಭಗವಾನ್ ವಿಶ್ವಕರ್ಮರು ತಯಾರಿಸಿ ಚಾಮುಂಡಿಗೆ ನೀಡಿದರು. ಶುದ್ಧತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿನಿಧಿಸುವ ಕಮಲವನ್ನು ಸೃಷ್ಟಿಕರ್ತ ಬ್ರಹ್ಮದೇವನು ನೀಡಿದ್ದು, ಇದನ್ನು ಪ್ರಪಂಚದ ಕಲ್ಮಶಗಳು ಮುಟ್ಟಲು ಸಾಧ್ಯವಿಲ್ಲ.
ಈಟಿಯು ಕೆಟ್ಟದ್ದನ್ನು ನಾಶಪಡಿಸುವ ಉರಿಯುತ್ತಿರುವ ಶಕ್ತಿಯನ್ನು ಸಂಕೇತಿಸುತ್ತದೆ. ಗಮನ ಮತ್ತು ಸದಾಚಾರದ ಶಕ್ತಿಯನ್ನು ಪ್ರತಿನಿಧಿಸುವ ಈಟಿಯನ್ನು ಅಗ್ನಿ ದೇವನು ಚಾಮುಂಡಿಗೆ ನೀಡಿದರು.
ಕಾಲ ದೇವನು ಗುರಾಣಿಯನ್ನು ಹಾನಿಯಿಂದ ರಕ್ಷಿಸಲು ಸೂಚಿಸುತ್ತದೆ, ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆಯ ಸಂಕೇತವಾಗಿದೆ