ಕೋಲಾರ – ಬಯಲು ಸೀಮೆ ಕೋಲಾರ ಜಿಲ್ಲೆಗೆ ಆಂದ್ರ ಪ್ರದೇಶದ ಗಡಿ ಭಾಗಕ್ಕೆ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಬಗ್ಗೆ ಆಂದ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡುರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿಯನ್ನು ಮಾಡಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನವದೆಹಲಿ ವೈಜಾಗ್ ಸ್ಟೀಲ್ ಕಂಪನಿ ಪುನಶ್ಚೇತನದ ಬಗ್ಗೆ ಚರ್ಚಿಸಲು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ ಕುಮಾರ ಸ್ವಾಮಿರನ್ನು ಭೇಟಿ ಮಾಡಿದ್ದಾಗ ಕೋಲಾರ ಸಂಸದ ಮಲ್ಲೇಶ್ ಬಾಬು ಕೃಷ್ಣಾ ನದಿ ನೀರು ಆಂಧ್ರಪ್ರದೇಶದಲ್ಲಿ ಹರಿಸಲಾಗುತ್ತಿದ್ದು ಆ ನೀರು ಕರ್ನಾಟಕದ ಗಡಿ ಹಂಚಿನವರೆವಿಗೂ ಹರಿಯುತ್ತಿದೆ, ಆಂಧ್ರಪ್ರದೇಶದಿಂದ ಒಂದು ಟಿ.ಎಂ.ಸಿ ಯಷ್ಟು ನೀರು ಕೋಲಾರ ಜಿಲ್ಲೆಗೆ ಹರಿಸಿದರೆ ಕೋಲಾರ ಜಿಲ್ಲೆಯ ಕೆರೆಗಳು ತುಂಬಿಸಬಹುದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು, ಕೋಲಾರ ಸಂಸದರ ಮನವಿಗೆ ಸ್ಪಂದಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿ ನೀರು ಹರಿಸಲು ಸಾಧ್ಯವಾದರೆ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸವರ್ಮ , ವಿಶಾಖಪಟ್ಟಣಂ ಸಂಸದ ಭರತಮ್ ,ಶ್ರೀನಿವಾಸಪುರ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಹಾಜರಿದ್ದರು.