ಗದಗ: ನವರಾತ್ರಿ ಹಬ್ಬ ಬಂದ್ರೆ ಸಾಕು ಪ್ರತಿನಿತ್ಯ ನವದುರ್ಗೆಯರ ಪೂಜೆ ಶ್ರಧ್ಧಾ ಭಕ್ತಿಯಿಂದ ಜರುಗುತ್ತದೆ. ಪ್ರತಿದಿನ ಒಂದೊಂದು ದೇವಿಯ ಅಲಂಕಾರ ಮಾಡಿ ಆರಾಧನೆ ಮಾಡಲಾಗುತ್ತದೆ.
Bread: ಬ್ರೆಡ್ ತಿನ್ನುವ ಮೊದಲು ಈ ವಿಚಾರ ತಿಳಿದಿರಲಿ! ಇಲ್ಲಿದೆ ನೋಡಿ ಅಡ್ಡಪರಿಣಾಮಗಳು!?
ಗದಗ ನಗರದ ಹುಡ್ಕೋ ಕಾಲೋನಿಯಲ್ಲಿರುವ ಡಾ. ಶಿವಶರಣೆ ನೀಲಮ್ಮ ತಾಯಿ ಆಧ್ಯಾತ್ಮ ವಿದ್ಯಾಶ್ರಮದಲ್ಲಿಯೂ ಕೂಡಾ ನವರಾತ್ರಿಯ ಒಂಭತ್ತು ದಿನಗಳ ಕಾಲ ದೇವಿಯ ಆರಾಧನೆ ಮತ್ತು ವಿಶೇಷ ಪೂಜೆ ಮಾಡಲಾಗುತ್ತಿದೆ. ಇಂದು ಆಶ್ರಮದಲ್ಲಿ ದೇವಿಗೆ ತರಕಾರಿ ಅಲಂಕಾರ ಮಾಡಲಾಗಿದೆ. ಆರತಿ ಬೆಳಗಿ, ಕಾಯಿ ಕರ್ಪೂರ ಹಚ್ಚಿ ಭಕ್ತಿ ಹಾಡುಗಳನ್ನ ಹಾಡಿ ಶ್ರಧ್ಧಾ ಭಕ್ತಿಯಿಂದ ದೇವಿಗೆ ಪೂಜಿಸಲಾಗಿದೆ.