ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಕರುನಾಡಿನ ನಂ.1 ವಾಹಿನಿ ಜೀ಼ ಕನ್ನಡ ಕಳೆದ 17 ವರುಷಗಳಿಂದ ವಾಹಿನಿಯ ಅತಿದೊಡ್ಡ ಪುರಸ್ಕಾರ ಕಾರ್ಯಕ್ರಮ ‘ಜೀ಼ ಕುಟುಂಬ ಅವಾರ್ಡ್ಸ್’ನ ಅದ್ಧೂರಿಯಾಗಿ ನಡೆಸುತ್ತಾ ಬಂದಿದೆ. ಅದೇ ಹಾದಿಯಲ್ಲಿ, ಈ ವರ್ಷವೂ ವಾಹಿನಿಯ ಏಳಿಗೆಗಾಗಿ ಶ್ರಮಿಸಿದ ನಿಮ್ಮ ನೆಚ್ಚಿನ ನಟ ನಟಿಯರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ಮೂಲಕ, ಅಭಿಮಾನಿಗಳ ಮುಂದೆ ಬರಲು ಜೀ಼ ಕನ್ನಡ ವಾಹಿನಿ ಸಜ್ಜಾಗಿದೆ.
ನವರಾತ್ರಿಯ 7ನೇ ದಿನ “ದೇವಿ ಕಾಲರಾತ್ರಿ” ಪೂಜೆ ಮಾಡಿ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಪಡೆಯಿರಿ.!
ಈಗಾಗಲೇ ತಮ್ಮ ಅಮೋಘವಾದ ನಟನೆ ಮತ್ತು ಕ್ರಿಯಾಶೀಲತೆಯಿಂದ ಜನಮನ ಗೆದ್ದಿರುವ ಕಲಾವಿದರನ್ನು ಜೀ಼ ಕುಟುಂಬದ ಸದಸ್ಯರನ್ನು ಪ್ರಶಂಸಿಸಿ, ಗೌರವಿಸುವ ನಿಟ್ಟಿನಲ್ಲಿ ಜೀ಼ ಕುಟುಂಬ ಅರ್ವಾಡ್ಸ್ 2024ರ ಓಟಿಂಗ್ ಪ್ರಕ್ರಿಯೆ ಆರಂಭಗೊಂಡಿದೆ.ಅಷ್ಟೇ ಅಲ್ಲದೆ, ವಿಭಿನ್ನ ಪ್ರಯತ್ನಗಳ ಮೂಲಕ ಜನರಿಗೆ ಹತ್ತಿರವಾಗಿರುವ ಜೀ಼ ಕನ್ನಡ ವಾಹಿನಿ ಈ ವರುಷ ಕರ್ನಾಟಕ ಸರ್ಕಾರದ ಜೊತೆಗೂಡಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಒದಗಿಸಲು ಸಹಾಯವಾಣಿ ಯೋಜನೆಯನ್ನು ಪರಿಚಯಿಸಲಿದೆ.
ಸಹಾಯವಾಣಿ ನಂಬರ್: 181 ಜೀ಼ ಕುಟುಂಬ ಅರ್ವಾಡ್ಸ್ 2024 ರ ಕಾರ್ಯಕ್ರಮ ಪ್ರಯುಕ್ತ ಕರುನಾಡಿನ 31 ಜಿಲ್ಲೆಗಳಿಗೂ ಜೀ಼ ಕನ್ನಡ ವಾಹಿನಿಯ ಅಭಿಮಾನದ ರಥ ಸಂಚರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಸಂಗ್ರಹಿಸಿ ನಿಮ್ಮ ನೆಚ್ಚಿನ ಕಲಾವಿದರುಗಳನ್ನು ಆಯ್ಕೆಮಾಡಲಿದೆ. ವೋಟಿಂಗ್ ಪ್ರಕ್ರಿಯೆ ಜಿಲ್ಲೆಗಳ ಆಯ್ದ ಭಾಗಗಳಲ್ಲಿ ನಡೆಯಲಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿ, ಜೋಡಿ ಸೇರಿ ಹಲವು ವಿಭಾಗಗಳಿಗೆ ಮತದ ಮೂಲಕ ತಮ್ಮ ಪ್ರೀತಿ, ಅಭಿಮಾನ ತೋರಿಸಿ ಪ್ರಶಸ್ತಿಗೆ ಭಾಜೀನರಾಗುವಂತೆ ಮಾಡಬಹುದಾಗಿದೆ.
ಈ ಅಭಿಮಾನದ ರಥ ಸಂಚಾರಕ್ಕೆ ಜೀ಼ ಕುಟುಂಬದ ಸದಸ್ಯರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ. ಈ ವೇಳೆ ಜೀ಼ ಕನ್ನಡ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.ಇದೇ ಅಕ್ಟೋಬರ್ ದಿನಾಂಕ 11 ಶುಕ್ರವಾರದಂದು ಧಾರವಾಡ,ಬೆಳಗಾವಿ ಹಾಗು ದಿನಾಂಕ 12 ಶನಿವಾರ ಗದಗ,ಬಾದಾಮಿ,ಬಾಗಲಕೋಟೆಯತ್ತ ಜೀ಼ ಕನ್ನಡ ವಾಹಿನಿಯ ಅಭಿಮಾನದ ರಥ ಬರಲಿದೆ. ವೋಟ್ ಮಾಡುವ ಮೂಲಕ ನಿಮ್ಮ ನೆಚ್ಚಿನ ಜೀ಼ ಕಲಾವಿದರನ್ನು ಆಯ್ಕೆಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.