ಮಂಡ್ಯ:- ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಬಳಿ ಇರುವ ಶನಿ ಮಠಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ಜರುಗಿದೆ. ಮಧ್ಯರಾತ್ರಿ ಶನಿ ಮಠದ ದೇಗುಲಕ್ಕೆ ಬೆಂಕಿ ಹಾಕಿ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಬೆಂಕಿಯ ಜ್ವಾಲೆಗೆ ದೇಗುಲ ಹಾಗು ಗೋಶಾಲೆ ಹೊತ್ತಿ ಉರಿದಿದೆ. ಕೂಡಲೇ ಅಲ್ಲಿನ ಸ್ಥಳೀಯರು, ಮಠದಲ್ಲಿದ್ದ ಗೋಶಾಲೆ ಗೋವುಗಳು ಹಾಗೂ ವೃದ್ದಾಶ್ರಮದದ ಜನರನ್ನು ರಕ್ಷಣೆ ಮಾಡಿದ್ದಾರೆ.
ನವರಾತ್ರಿಯ 7ನೇ ದಿನ “ದೇವಿ ಕಾಲರಾತ್ರಿ” ಪೂಜೆ ಮಾಡಿ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಪಡೆಯಿರಿ.!
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ನೂ ಜಾಗದ ವಿವಾದಕ್ಕೆ ಶನಿ ಮಠಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಶನಿಮಠದ ಸ್ವಾಮೀಜಿ ಹಾಗು ಧರ್ಮದರ್ಶಿ ಅವರು ಕಿಡಿಗೇಡಿಗಳ ವಿರುದ್ದ ದೂರು ದಾಖಲಿಸಿದ್ದಾರೆ. ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.