ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಎಲೆಕ್ಟ್ರಿಕ್ ರೈಸ್ ಕುಕ್ಕರ್ನಲ್ಲಿ ಅಕ್ಕಿ ಬೇಯಿಸುತ್ತಿದ್ದಾರೆ. ಈ ಪದ್ಧತಿ ನಗರಗಳಲ್ಲಷ್ಟೇ ಅಲ್ಲ ಹಳ್ಳಿಗಳಲ್ಲೂ ಹಬ್ಬಿದೆ. ಇದು ಸುಲಭವಾದ ವಿಧಾನವಾದ್ದರಿಂದ ಹೆಚ್ಚಿನವರು ಈ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಆದರೆ, ಎಲೆಕ್ಟ್ರಿಕ್ ರೈಸ್ ಕುಕ್ಕರ್ನಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಲೆಕ್ಟ್ರಿಕ್ ರೈಸ್ ಕುಕ್ಕರ್ನಲ್ಲಿ ಬೇಯಿಸಿದ ಅನ್ನದಲ್ಲಿ ಪೋಷಕಾಂಶಗಳು ಕಳೆದುಹೋಗುತ್ತವೆ ಮತ್ತು ಅಡುಗೆ ಮಾಡುವಾಗ ಅಪಾಯಕಾರಿ ರಾಸಾಯನಿಕಗಳು ಅದರಿಂದ ಬಿಡುಗಡೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಎಲೆಕ್ಟ್ರಿಕ್ ರೈಸ್ ಕುಕ್ಕರ್ನಲ್ಲಿ ಬೇಯಿಸಿದ ಅನ್ನವನ್ನು ತಿನ್ನುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಎಲೆಕ್ಟ್ರಿಕ್ ರೈಸ್ ಕುಕ್ಕರ್ಗಿಂತ ಪ್ರೆಶರ್ ಕುಕ್ಕರ್ ಉತ್ತಮ ಎಂದು ಹೇಳಲಾಗುತ್ತದೆ.
ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ನಲ್ಲಿ ಅಕ್ಕಿಯನ್ನು ವೇಗವಾಗಿ ಬೇಯಿಸಲಾಗುತ್ತದೆ. ಅದರಿಂದ ಪ್ರೆಷರ್ ಹೆಚ್ಚಿ ಅದರಲ್ಲಿನ ಪೋಷಕಾಂಶಗಳು ನಾಶವಾಗುತ್ತವೆ. ಕರೆಂಟ್ ಆಧರಿಸಿ ಬೇಯಿಸಿದ ಅನ್ನವನ್ನು ತಿನ್ನದಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮಣ್ಣಿನ ಪಾತ್ರೆ, ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಉತ್ತಮ ಎನ್ನುತ್ತಾರೆ.ಇದರಲ್ಲಿ ತಯಾರಿಸಿದ ಆಹಾರ ಸೇವನೆಯಿಂದ ಹೊಟ್ಟೆ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಸಂಧಿವಾತ, ಮಧುಮೇಹ, ಗ್ಯಾಸ್ ಸಮಸ್ಯೆ, ಅಧಿಕ ತೂಕ, ಸೊಂಟ ನೋವು ಹೀಗೆ ಹಲವು ಸಮಸ್ಯೆಗಳು ಬರುತ್ತವೆ ಎನ್ನಲಾಗಿದೆ. . ಹಾಗಾಗಿ ಆದಷ್ಟು ಪ್ರೆಶರ್ ಕುಕ್ಕರ್ ಅಥವಾ ಕರೆಂಟ್ ಕುಕ್ಕರ್ ನಲ್ಲಿ ಅಡುಗೆ ಮಾಡುವುದನ್ನು ತಪ್ಪಿಸುವುದು ಉತ್ತಮ.