ಗದಗ: ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು ಕಾಂಗ್ರೆಸ್ ಪರಿಸ್ಥಿತಿ ನೋಡಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ನಂತರ ಎಂದು ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ದೇಶಪಾಂಡೆ, ರಾಯರಡ್ಡಿ, ಎಲ್ಲರೂ ಹೇಳಿದ್ದರು.
ನಾವೆಲ್ಲರೂ ಬಂಡೆಯ ಹಾಗೇ ಸಿಎಂ ಜೊತೆಗೆ ಇರುತ್ತೇವೆ ಎಂದಿದ್ದರು. 5 ವರ್ಷ ಅವರೇ ಮುಖ್ಯಮಂತ್ರಿ ಅಂದರೂ ಅದು ಕೃತಕತೆ, ನಾಟಿಕೀಯ ಹೇಳಿಕೆಯಾಗುತ್ತದೆ. ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ. ಹೀಗಾಗಿ ಬೇರೆ ಬೇರೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದರು. ಒಂದು ಕಡೆ ದಲಿತ ಮುಖ್ಯಮಂತ್ರಿ ಎಂದು ಚರ್ಚೆ ನಡೆಯುತ್ತಿದೆ.
ನವರಾತ್ರಿಯ 7ನೇ ದಿನ “ದೇವಿ ಕಾಲರಾತ್ರಿ” ಪೂಜೆ ಮಾಡಿ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಪಡೆಯಿರಿ.!
ಮುಂಚೆ ಯಾಕೆ ದಲಿತ ಮುಖ್ಯಮಂತ್ರಿಯನ್ನು ಮಾಡಲಿಲ್ಲ? ಕಾಂಗ್ರೆಸ್ಗೆ ಬಹುಮತ ಹೊಸದಾಗಿ ಬಂದಿದೀಯಾ? ಆವಾಗ ಯಾಕೆ ದಲಿತರು ನೆನಪಾಗಲಿಲ್ಲ? ಕಾಂಗ್ರೆಸ್ನ ಭ್ರಷ್ಟಾಚಾರಗಳ ಬಗ್ಗೆ ತುಂಬಾ ಸ್ಪಷ್ಟವಾಗಿ ಕೋರ್ಟ್ನಲ್ಲಿ ಆದೇಶವಾಗಿದೆ. ನಾನು ಸಿಎಂ ಅವರಿಗೆ ಪ್ರಾರ್ಥನೆ ಮಾಡುತ್ತೇನೆ. ನೀವು ರಾಜೀನಾಮೆ ಕೊಟ್ಟು ತನಿಖೆಯಲ್ಲಿ ಕ್ಲೀನ್ಚೀಟ್ ತೆಗೆದುಕೊಂಡು ಬನ್ನಿ. ಬಂದು ಮತ್ತೆ ಸಿಎಂ ಆಗಿ ಏನು ಅಭ್ಯಂತರವಿಲ್ಲ. ಸಿಎಂ ರಾಜೀನಾಮೆ ಕೊಡದೇ ಕೋರ್ಟಿಗೆ ಅಪಮಾನವಾಗಿದೆ. ಕೇವಲ ಕೋರ್ಟಿಗೆ ಅಲ್ಲ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ ಎಂದರು.