ಹುಬ್ಬಳ್ಳಿ: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ನ್ನು ಹೆಡೆಮುರಿ ಕಟ್ಟಿದ್ದಾರೆ. ಎರಡ್ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಈ ಗ್ಯಾಂಗ್, ಹುಬ್ಬಳ್ಳಿಯ ವ್ಯಾಪಾರಿ ಚಗನ್ ಲಾಲ್ ಚೌಧರಿ ಎಂಬುವರಿಗೆ ಹನಿಟ್ರ್ಯಾಪ್ ಮಾಡಿತ್ತು. ಅವರ ವಿಡಿಯೋಗಳನ್ನು ಮಾಡಿಕೊಂಡು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಪರ್ಫ್ಯೂಮ್ ಬಳಸಿದರೆ ಕ್ಯಾನ್ಸರ್ ಬರುತ್ತಾ!? ಸೆಂಟ್ ಪ್ರಿಯರೇ ನೀವು ನೋಡಲೇಬೇಕಾದ ಸುದ್ದಿ!
ಈ ಕುರಿತು ಗಾಬರಿಯಾದ ಚಗನ್ ಲಾಲ್, ಅಶೋಕ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ಎಚ್ಚೆತ್ತ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ನಾಲ್ವರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸತ್ಯಾಂಶ ಬಾಯ್ಬಿಟ್ಟ ಖದೀಮರು, ‘ಈ ಗ್ಯಾಂಗ್ನ ಕೆಲ ಸದಸ್ಯರು ಅಂಗಡಿಗಳ ಮೇಲಿನ ನಂಬರ್ಗಳನ್ನು ತಗೆದುಕೊಂಡು ಹೋಗಿ ಯುವತಿಗೆ ನೀಡುತ್ತಿದ್ದರು.
ನಂಬರ್ ಸಿಗುತ್ತಿದ್ದಂತೆ ಆರೋಪಿ ಯುವತಿ ಜೋಯಾ ಶಬಾನಾ ಚಾಟಿಂಗ್ ಮಾಡಿ ಬಲೆಗೆ ಹಾಕಿಕೊಳ್ಳುತ್ತಿದ್ದರು. ಇದೀಗ ಜೋಯಾ ಶಬಾನಾ, ಸೈಯದ್, ತೌಸಿಫ್, ಅಬ್ದುಲ್ ರೆಹಮಾನ್ ಸೇರಿದಂತೆ ನಾಲ್ವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.