ಕಲಘಟಗಿ(ಧಾರವಾಡ) : ತಾಲೂಕಿನ ಮುಂಗಾರಿನ ಸಮಯದಲ್ಲಿ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಇತ್ತ ಇಳುವರಿ ಇಲ್ಲದೆ ರೈತ ವರ್ಗ ಸಂಪೂರ್ಣ ಕಂಗಾಲಾಗಿದ್ದಾರೆ.
Hubballi: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ- ಚೆಲುವರಾಸ್ವಾಮಿ
ತಾಲೂಕಿನಲ್ಲಿ ಸರಿ ಸುಮಾರು ಶೇಕಡಾ 50 ಬೆಳೆದ ಬೆಳೆ ಈಗಾಗಲೇ ಹಾಳಾಗಿ ಹೋಗಿವೆ ಹಾಗೂ ಕೈಗೆ ಬಂದಂತಹ ಬೆಳೆಯನ್ನು ಬಿಸಿಲಿನ ಛಾಯೆ ಇಲ್ಲದೆ ಪ್ರತಿನಿತ್ಯ ಒಣಗಿಸುವ ಕಾರ್ಯದಲ್ಲಿ ತಾಲೂಕಿನ ರೈತ ವರ್ಗ ನಿರಂತರವಾಗಿ ಹರಸಾಹಸ ಪಡುವಂತಾಗಿದೆ.
ಗ್ರಾಮದ ವಿವಿಧ ರಸ್ತೆಯಲ್ಲಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಯಾಬಿನ್, ಗೋವಿನ ಜೋಳ, ನಿರಂತರ ಒಣಗಿಸುವ ಕಾರ್ಯ ಚಟುವಟಿಕೆಯಲ್ಲಿ ರೈತರು ತೊಡಗಿಕೊಂಡಿದ್ದಾರೆ.
ತಾಲೂಕಿನಲ್ಲಿ ನಿರಂತರ ಮಳೆ ಮೋಡ ಕವಿದ ವಾತಾವರಣ ಇರುವುದರಿಂದ ರೈತ ವರ್ಗದ ಪರಿಸ್ಥಿತಿ ಕೈಮೀರಿ ಹೋಗಿದೆ. ಸೊಸೈಟಿ ಹಾಗೂ ಬ್ಯಾಂಕುಗಳಿಂದ ಸಾಲ ಪಡೆದು ಮುಂಗಾರಿನ ಬೆಳೆದ ಬೆಳೆಯನ್ನೇ ನಂಬಿ ಕೂತಿದ್ದ ತಾಲೂಕಿನ ರೈತವರ್ಗಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ವಾರದಲ್ಲಿ ಮೂರು ದಿನಗಳ ಕಾಲ ಸಂಜೆ ನಿರಂತರ ಧಾರಾಕಾರ ಸುರುಯುತ್ತಿರುವ ಮಳೆ ತಾಲೂಕಿನಲ್ಲಿ ಇದೇ ವಾತಾವರಣ ಮುಂದುವರೆದರೆ ತಾಲೂಕಿನ ರೈತರ ಸ್ಥಿತಿ ಬೀದಿಗೆ ಬರುವುದು ಗ್ಯಾರಂಟಿಯಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗಾಗಿ ಸಮರ್ಪಕವಾಗಿ ಸಾಕಷ್ಟು ಯೋಜನೆಗಳು ತಂದಿದ್ದರು ಕೂಡ ಪ್ರತಿ ರೈತ ವರ್ಗಕ್ಕೆ ಅತಿವೃಷ್ಟಿ, ಬೆಳೆ ಹಾನಿ, ಬರಗಾಲ ದಿಂದ ನಮ್ಮ ರೈತರು ಪ್ರತಿ ಹಂತದಲ್ಲೂ ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕವಾಗಿ ಬೆಳೆದ ಬೆಳೆ ಕೈಗೆ ಸಿಗಲಾರದೆ ಸಾಲದ ಸುಳಿಯಲ್ಲಿ ಹಾಗೂ ಕಿರುಕುಳಕ್ಕೆ ಹೆದರಿ ರೈತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗಾಗಲೇ ಸಾಕಷ್ಟು ನಡೆದಿವೆ.
ಇನ್ನಾದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಾಲ ಕೂಡಲೇ ಮನ್ನಾ ಮಾಡುವುದು ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಸರ್ಕಾರಕ್ಕೆ ವರದಿ ನೀಡಿ ರೈತರ ಹಿತ ಕಾಪಾಡಬೇಕಾಗಿದೆ.