ಬೆಂಗಳೂರು: ಖಾಸಗಿ ವಾಹಿನಿಯ ಜನಪ್ರಿಯ ಶೋ ನಲ್ಲಿ ಮನರಂಜನೆಗೆ ಬಳಸಿದ ಡೈಲಾಗ್ ಅದೊಂದ ಡೈಲಾಗ್ ಜಾತಿ ನಿಂದನೆ ಆರೋಪಕ್ಕೆ ಗುರಿಯಾಗಿದ್ದಾನೆ. ಯಾರು ಸೆಲೆಬ್ರೆಟಿ ಯಾವುದು ಆ ಪದ…ಏನೀ ಆರೋಪ ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.
ಕಿರುತೆರೆ ಕಾಮಿಡಿಯ ಸ್ಯಾಂಡಲ್ ವುಡ್ ನಟ ಕಾರ್ತೀಕ್ ಅಲಿಯಾಸ್ ಹುಲಿ ಕಾರ್ತೀಕ್ ವಿರುದ್ದ ಜಾತಿ ನಿಂದನೆ ಆರೋಪ ಕೇಳಿಬಂದಿದೆ. ಭೋವಿ ಸಮುದಾಯವರಿಗೆ ನಟ ಕಾರ್ತೀಕ್ ಕಳೆದ ಆಗಸ್ಟ್ 30 ಮತ್ತು ಸೆಪ್ಟಂಬರ್ 1 ರಂದು ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಸ್ಟುಡಿಯೋ ನಲ್ಲಿ ಹೇಳಾದ ಡೈಲಾಗ್ ಬಳಕೆ ಪದ ಕುರಿತು ಆಕ್ಷೇಪಿಸಿ ಕೆ.ಆರ್.ಪುರಂ ನ ಲೋಕೇಶ್ ಎಂಬಾತ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ನಟ ಹುಲಿ ಕಾರ್ತೀಕ್ ಸೇರಿದಂತೆಕಾರ್ಯಕ್ರಮದ ಸ್ಕ್ರಿಪ್ಟ್ ರೈಟರ್ ಮತ್ತು ಡೈರೆಕ್ಟರ್ ವಿರುದ್ದವೂ ಆರೋಪಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ(ಬಿಎನ್ ಎಸ್)ಅಟ್ರಾಸಿಟಿ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಾಗಿದೆ.
ಕಾಮಿಡಿಯನ್ ಕಂ ಸ್ಯಾಂಡಲ್ವುಡ್ ನಟ ಹುಲಿಕಾರ್ತೀಕ್ ತಮ್ಮ ವಿರುದ್ದ ದಾಖಲಾಗಿರುವ ಅಟ್ರಾಸಿಟಿ ಕೇಸ್ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ಸಂಬಂಧ ನಟ ಕಾರ್ತಿಕ್ @ ಹುಲಿ ಕಾರ್ತೀಕ್ ಹೇಳಿಕೆ ನೀಡಿದ್ದು,ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡ್ತೇವೆ, ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ.ಯಾವುದೇ ಜಾತಿ, ಧರ್ಮದ ಬಗ್ಗೆ ಹಾಸ್ಯಮಾಡುವುದಕ್ಕೆ ಖಾಸಗಿ ವಾಹಿನಿಯಲ್ಲಿ ಅವಕಾಶ ಇರುವುದಿಲ್ಲ.
ಸೂಕ್ತವಾಗಿ ವ್ಯವಸ್ಥೆ ಇದ್ದು ಅದರಂತೆ ಸ್ಕ್ರೀಪ್ಟ್ ತಯಾರಾಗುತ್ತೆ.ನಾನು ಬಳಸಿರುವ ಪದ “ಹೊಂಡ” ಜಾತಿ ಸೂಚಕ ಪದವಲ್ಲ. “ನೀನೂ ಗುಂಡನಾ ರೋಡ್ ನಲ್ಲಿ ಬಿದ್ದಿರುವ ಹೊಂಡ ಇದ್ದಹಂಗ್ ಇದ್ದೀಯಾ” ಎಂದು ಹೇಳಿದ್ದೇನೆ. ಖಾಸಗಿ ವಾಹಿನಿಯಲ್ಲಿ ವಾಕ್ಯ ಬಳಕೆ ಮಾಡಿವಾಗ ಸ್ಪಷ್ಟವಾಗಿ ಹೊಂಡಾ ಎಂದು ಬಳಸಿದ್ದೇನೆ.
ಮ್ಯೂಸಿಕ್ ಜೊತೆಗೆ ಡೈಲಾಗ್ ಹೇಳುವಾಗ ಹೊಂಡ ಎಂಬ ಪದ ಸಮುದಾಯದ ಹೆಸರಿಸಿರುವಂತೆ ಕೇಳಿಸಿರಬಹುದು.ಯಾವುದೇ ಸಮುದಾಯವನ್ನು ಹಾಸ್ಯ ಮಾಡುವ ಉದ್ದೇಶ ಇಲ್ಲ.ಮನರಂಜನೆ ನೀಡುವ ಉದ್ದೇಶದಿಂದ ನಟನೆ ಮಾಡ್ತೇವೆ.
ಒಂದು ವೇಳೆ ಆ ರೀತಿ ನಿಮಗೆ ಕೇಳಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ.ಯಾರಿಗೂ ನೋವುಂಟುಮಾಡುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿರುವ ನಟ ಹುಲಿ ಕಾರ್ತೀಕ್ ತಮ್ಮ ಮೇಲಿನ ಆರೋಪ ಸಂಬಂಧ ಗೊಂದಲಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಅದೇನೆ ಇರಲಿ ಹುಲಿ ಕಾರ್ತೀಕ್ ತಮ್ಮ ಮೇಲಿನ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ಆದ್ರೆ ಹುಲಿ ಕಾರ್ತೀಕ್ ಸ್ಪಷ್ಟೀಕರಣ ನೀಡಿರುವಂತೆ ಜಾತಿ ಸೂಚಕ ಪದ ಬಳಕೆ ಮಾಡದೆ ಇದ್ದಲ್ಲಿ ಅನ್ಯತಾ ಅವ್ರ ವಿರುದ್ದ ಗಂಭೀರ ಆರೋಪ ಮಾಡಿದಂತೆ. ಒಂದು ವೇಳೆ ತನಿಖೆ ವೇಳೆ ಅವ್ರ ಪದ ಬಳಕೆ ಕುರಿತು ಜಾತಿ ನಿಂದನೆ ಆಗಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಲಿದೆ. ಅನ್ನಪೂರ್ಣೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಸದ್ಯ ಕೇಸ್ ದಾಖಲಾಗಿದ್ದು, ಪೋಲಿಸರು ಅಟ್ರಾಸಿಟಿ ಪ್ರಕರಣ ಹಿಂದಿನ ಸತ್ಯಾಸತ್ಯತೆ ಸಂಬಂಧ ತನಿಖೆ ನಡೆಸಿದ ಬಳಿಕ ಆರೋಪದ ಸತ್ಯಾಂಶ ಹೊರಬೀಳಲಿದೆ.