ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಪ್ರತಿಯೊಂದು ಭಾಷೆಯಲ್ಲೂ ಆಯಾ ಭಾಷೆಯ ಸ್ಟಾರ್ ನಟರು ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ತಮಿಳಿನಲ್ಲಿ ಇದೇ ಮೊದಲ ಭಾರಿಗೆ ನಟ ವಿಜಯ್ ಸೇತುಪತಿ ಬಿಗ್ ಬಾಸ್ ಸೀಸನ್ 8 ಅನ್ನು ಹೋಸ್ಟ್ ಮಾಡ್ತಿದ್ದಾರೆ. ತಮಿಳು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ 24 ಗಂಟೆಯಲ್ಲೇ ಸ್ಪರ್ಧಿ ಎಲಿಮಿನೇಟ್ ಆಗಿದ್ದು, ಇಂತಹ ಘಟನೆ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಆದ 24 ಗಂಟೆಯೊಳಗೆ ದೊಡ್ಮನೆಯಿಂದ ನಟಿ ಔಟ್ ಆಗಿದ್ದಾರೆ. ಬಿಗ್ ಬಾಸ್ ಹೋಸ್ಟ್ ವಿಜಯ್ ಸೇತುಪತಿ ಕಾರ್ಯಕ್ರಮ ಶುರುವಾಗಿ 24 ಗಂಟೆ ಕಳೆಯುವ ಮುನ್ನವೇ ಒಳಗೆ ಹೋದ ಸ್ಪರ್ಧಿಯನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾರೆ. ಈ ಅನಿರೀಕ್ಷಿತ ಘೋಷಣೆಗೆ ಬಿಗ್ ಬಾಸ್ ವೀಕ್ಷಕರ ಜೊತೆಗೆ ಬಿಗ್ ಬಾಸ್ ಮನೆ ಮಂದಿಯೂ ಶಾಕ್ ಆಗಿದ್ದಾರೆ.
ತಮಿಳಿನ ಬಿಗ್ ಬಾಸ್ ಸೀಸನ್ 8ಕ್ಕೆ ಮೊದಲ ದಿನ ಬರೋಬ್ಬರಿ 18 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಹೋಗುವಾಗ ಎಲ್ಲರಿಗೂ ಒಂದೊಂದು ಟ್ರೋಫಿಯನ್ನು ವಿಜಯ್ ಸೇತುಪತಿ ಕೊಟ್ಟು ಕಳಿಸಿದ್ದರು. ಮೊದಲ ದಿನವೇ ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ನೀಡಲಾಯ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದಿದ್ದರು.
ಅದರಂತೆ ಮನೆಯ ಕಿರಿಯ ಸ್ಪರ್ಧಿಯಾಗಿದ್ದ ಸಚಾನಾ ನಮಿದಾಸ್ ಅವರನ್ನು ಮನೆಯ ಇತರೆ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದರು. ಹಾಗಾಗಿ ಒಂದೇ ದಿನಕ್ಕೆ ಸಚಾನಾ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದು ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ನಟಿಯನ್ನು ಬಿಗ್ ಬಾಸ್ಗೆ ಬಂದ ಒಂದೇ ದಿನಕ್ಕೆ ಎಲಿಮಿನೇಟ್ ಮಾಡೋದು ಎಷ್ಟು ಸರಿ ಎಂದು ವಾಹಿನಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇನ್ನೂ ಸಚಾನಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸಚಾನಾ ನಮಿದಾಸ್ ಅವರು ತಮಿಳಿನ ಸೂಪರ್ ಹಿಟ್ ಸಿನಿಮಾ ‘ಮಹಾರಾಜ’ ಚಿತ್ರದಲ್ಲಿ ವಿಜಯ್ ಸೇತುಪತಿ ಮಗಳ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.