ಜನ ಸಾಮಾನ್ಯರ ಹಣಕ್ಕೆ ಕಿಡಿಗೇಡಿಗಳು ನಾನಾ ರೀತಿಯಲ್ಲಿ ಕನ್ನ ಹಾಕುತ್ತಾರೆ. ಅದರಲ್ಲೂ ಇತ್ತಿಚೆಗೆ ಸೈಬರ್ ವಂಚಕರ ಹಾವಾಳಿ ಹೆಚ್ಚಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಜನರ ಹಣಕ್ಕೆ ನಾಮ ಹಾಕಲು ಖದೀಮರು ಕಾಯುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ಸೈಬರ್ ವಂಚಕರಿಂದ ಬರೋಬ್ಬರಿ 1.6 ಕೋಟಿ ರೂಪಾಯಿ ಕಳೆದುಕೊಂಡುಕೊಂಡಿದ್ದಾರೆ.
ಮುಂಬೈನ ವ್ಯಕ್ತಿ ಐಟಿ ಉದ್ಯೋಗಿ ಒಬ್ಬರು ಬರೋಬ್ಬರಿ 1.6 ಕೋಟಿ ರೂಪಾಯಿ ಹಣವನ್ನು ಕಳ್ಕೊಂಡಿದ್ದಾರೆ. ಯುವತಿ ಇಂಟರ್ನೆಟ್ ಬ್ರೌಸ್ ಮಾಡ್ತಿದ್ದರು. ಅಲ್ಲಿ ಷೇರು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುವ ಜಾಹೀರಾತು ನೋಡಿದ್ದಾಳೆ. ಜಾಹೀರಾತು ಹೂಡಿಕೆಯ ಮೇಲೆ ಗಣನೀಯ ಲಾಭದ ಭರವಸೆ ನೀಡ್ತಿತ್ತು. ಇದರ ಮೇಲೆ ಆಸಕ್ತಿ ಹೆಚ್ಚಿ ಅಲ್ಲೇ ಇದ್ದ ಜಾಹೀರಾತಿನ ಅಡಿಯಲ್ಲಿರುವ ಲಿಂಕ್ ಕ್ಲಿಕ್ ಮಾಡಿದರು. ಲಿಂಕ್ ಕ್ಲಿಕ್ ಮಾಡಿದ ತಕ್ಷಣ, 125 ಸದಸ್ಯರನ್ನು ಹೊಂದಿರುವ ವಾಟ್ಸ್ಆ್ಯಪ್ ಗುಂಪಿಗೆ ಸೇರಿಸಲಾಯಿತು. ಇಲ್ಲಿ ತಜ್ಞರು ನೀಡಿದ ಸಲಹೆಯಿಂದ ಅನೇಕ ಸದಸ್ಯರು ಗಮನಾರ್ಹ ಲಾಭ ಗಳಿಸಿದ್ದಾರೆ ಎಂದು ಕಿಡಿಗೇಡಿಗಳು ವಿವರಿಸಿದರು.
ಇದು ಹೌದೆಂದು ನಂಬಿದ ಸಂತ್ರಸ್ತೆ ತಮ್ಮ ಖಾತೆಯ ವಿವರವನ್ನು WhatsApp ಗ್ರೂಪ್ಗೆ ಹಂಚಿಕೊಂಡಿದ್ದಾರೆ. ಕೊನೆಗೆ ಕಾನೂನು ಬದ್ಧವಾಗಿರುವ ಮಾರ್ಕೆಟಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಹೇಳಿದರು. ಹಾಗೆ ಮಾಡಿದರು. ಆಗಸ್ಟ್ 16 ರಿಂದ ಆಗಸ್ಟ್ 20 ರವರ ಅವಧಿಯಲ್ಲಿ 1.6 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮೇಲೆ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಅಲ್ಲದೇ ಹಣವನ್ನು ವಾಪಸ್ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ವಿಫಲವಾಗಿದೆ.