ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಲರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು
ಹೆಸರೇ ಹೇಳುವಂತೆ ತಾಯಿಯು ಕಾರ್ಗತ್ತಲು ಮತ್ತು ಸಮಯದ ರೂಪವಾಗಿದ್ದಾಳೆ. ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ಕಾಂತಿಯು ಹೊರಹೊಮ್ಮುತ್ತದೆ. ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ.ಈಕೆಯ ವಾಹನ ಗಾರ್ಧಭ
ಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.
ಕಾಲರಾತ್ರಿಯು ಶನಿಗ್ರಹದ ಅಧಿಪತಿ. ಜನರು ಮಾಡಿರುವಂತಹ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವವಳು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವವಳು ಈಕೆ. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವವನ್ನು ತಗ್ಗಿಸಬಹುದು.
ದಾನವರು, ರಾಕ್ಷಸರು, ಭೂತ-ಪ್ರೇತ ಮುಂತಾದುವುಗಳು ಇವಳ ಸ್ಮರಣೆಯಿಂದಲೇ ಭಯಭೀತವಾಗಿ ಓಡಿ ಹೋಗುತ್ತವೆ. ಇವಳ ಉಪಾಸಕರಿಗೆ ಅಗ್ನಿ, ಜಲ, ಶತ್ರು ಮತ್ತು ರಾತ್ರಿಯ ಭಯ ಎಂದೂ ಆಗುವುದಿಲ್ಲ
ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂವೆಂದರೆ ರಾತ್ರಿ ಅರಳುವ ಮಲ್ಲಿಗೆ ಹೂವು. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನ ಕಾಲರಾತ್ರಿಗೆ ಪೂಜೆ ಸಲ್ಲಿಸಬೇಕು. ಮೊದಲು ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು. ಈ ದಿನ ಕಾಲರಾತ್ರಿಗೆ ಅನ್ನದಿಂದ ಮಾಡಿದ ಯಾವುದೇ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.
ಸ್ತುತಿ
ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಕಾಲರಾತ್ರಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಸರ್ವಭಯವೂ ನಿವಾರಣೆಯಾಗುವುದು. ವ್ಯಕ್ತಿಯ ಶ್ರೋಯೋಭಿವೃದ್ಧಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ತೊಂದರೆಗಳೂ ನಿವಾರಣೆಯಾಗುವುದು ಹಾಗೂ ಸರ್ವರೋಗಗಳಿಂದ ಮುಕ್ತಿ ಸಿಗುವುದು. ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವವಳು